ಪವಿತ್ರ ಗಂಗೆ ತಟದಲ್ಲಿ ಗಂಗಾರತಿ ಮಾಡಿದ ಪ್ರಧಾನಿ ಮೋದಿ!

By Web DeskFirst Published Apr 25, 2019, 9:46 PM IST
Highlights

ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ| ಕೇಸರಿಮಯವಾದ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿ| ಸುಮಾರು 7 ಕಿ.ಮೀ. ದೂರದ ಭರ್ಜರಿ ರೋಡ್ ಶೋ| ದಶಾಶ್ವಮೇಧ ಘಾಟ್’ನಲ್ಲಿ ಪ್ರಧಾನಿ ಮೋದಿಯಿಂದ ಗಂಗಾರತಿ| 7 ಅರ್ಚಕರಿಂದ ಸಾಂಪ್ರದಾಯಿಕ ಗಂಗಾರತಿ| ಗಂಗೆ ತಟದಲ್ಲಿ ಶಿವನ ಆರಾಧನೆಯಲ್ಲಿ ಪಾಲ್ಗೊಂಡ ಪ್ರಧಾನಿ|

ವಾರಾಣಸಿ(ಏ.25): ಸ್ವಕ್ಷೇತ್ರ ವಾರಾಣಸಿಯಲ್ಲಿ ಇಂದು ಭರ್ಜರಿ ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿನ ದಶಾಶ್ವಮೇಧ ಘಾಟ್’ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಶ್ರದ್ಧೆಯಿಂದ ಪಾಲ್ಗೊಂಡರು.

Varanasi: Prime Minister Narendra Modi performs aarti at Dashashwamedh Ghat pic.twitter.com/hFg1j84elS

— ANI UP (@ANINewsUP)

ಬನಾರಾಸ್ ವಿವಿಯಲ್ಲಿ ಪಂಡಿತ್ ಮದನ್ ಮೋಹನ್ ಮಾಳವೀಯ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಲಂಕಾ ಗೇಟ್’ನಿಂದ ರೋಡ್ ಶೋ ಆರಂಭಿಸಿದರು.

Varanasi: Prime Minister Narendra Modi performs aarti at Dashashwamedh Ghat pic.twitter.com/4iqUYtDWcs

— ANI UP (@ANINewsUP)

ಸುಮಾರು 7 ಕಿ.ಮೀ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ, ಕೊನೆಯಲ್ಲಿ ದಶಾಶ್ವಮೇಧ ಘಾಟ್’ಗೆ ಬಂದಿ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

PM Narendra Modi offers prayers at Dashashwamedh Ghat in Varanasi pic.twitter.com/9d9j7VjU2G

— ANI UP (@ANINewsUP)

ಸುಮಾರು 7 ಅರ್ಚಕರಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ವೇಳೆ ಶೀವನ ಆರಾಧನೆ ಮಾಡಲಾಗಿದ್ದು, ಪ್ರಧಾನಿ ಮೋದಿ ಕೂಡ ಶಿವಾರಾಧನೆಯಲ್ಲಿ ಪಾಲ್ಗೊಂಡರು.

PM Narendra Modi offers prayers at Dashashwamedh Ghat in Varanasi pic.twitter.com/5gXvz9VEmH

— ANI UP (@ANINewsUP)

ಬಳಿಕ ಗಂಗೆ ತಟದಲ್ಲಿ ಗಂಗಾರತಿಯಲ್ಲಿ ಪಾಲ್ಗೊಂಡ ಪ್ರಧಾನಿ, ಗಂಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಗೆ ಸಾಥ್ ನೀಡಿದರು.

click me!