ಮಾಜಿ ಕ್ರಿಕೆಟಿಗ ಕಂ ರಾಜಕಾರಣಿ ಗೌತಮ್ ಗಂಭೀರ್ ಬಿಜೆಪಿ ಅಭ್ಯರ್ಥಿಯಾಗಿ ಡೆಲ್ಲಿಯಲ್ಲಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಆದಾಯವನ್ನು ಘೋಷಿಸಿಕೊಂಡಿದ್ದು, ರಾಷ್ಟ್ರರಾಜಧಾನಿಯಲ್ಲಿ ಸ್ಫರ್ದಿಸುತ್ತಿರುವ ಅಭ್ಯರ್ಥಿಗಳ ಪೈಕಿ ಅತ್ಯಂತ ಎನ್ನುವ ಕೀರ್ತಿಗೆ ಗಂಭೀರ್ ಪಾತ್ರರಾಗಿದ್ದಾರೆ.
ನವದೆಹಲಿ[ಏ.25]: ಪೂರ್ವ ದೆಹಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ತಮ್ಮ ಬಳಿ 147 ಕೋಟಿ ರುಪಾಯಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ 2019: ನಾಮಪತ್ರ ಸಲ್ಲಿಸಿದ ಕ್ರಿಕೆಟಿಗ ಗೌತಮ್ ಗಂಭೀರ್!
ಇದು ದೆಹಲಿಯಲ್ಲಿ ಸ್ಪರ್ಧೆ ಮಾಡಿರುವ ಎಲ್ಲಾ ಪಕ್ಷಗಳ 349 ಅಭ್ಯರ್ಥಿಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಇನ್ನು 2017-18ರಲ್ಲಿ ತಮ್ಮ ಆದಾಯ 12.40 ಕೋಟಿ ರುಪಾಯಿ ಎಂದು ನಾಮಪತ್ರದ ಜತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಗಂಭೀರ್ ಮಾಹಿತಿ ನೀಡಿದ್ದಾರೆ. ಇನ್ನು ದಕ್ಷಿಣ ದೆಹಲಿಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ಬಾಕ್ಸರ್ ವಿಜೇಂದರ್ 12.14 ಕೋಟಿ ರುಪಾಯಿ ಆಸ್ತಿ ಘೋಷಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿ ಪೂರ್ವದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಗಿರಿ ಸ್ಪರ್ಧಿಸಿದ್ದರು. ಇದೀಗ ಗಂಭೀರ್‌ಗೆ ಬಿಜೆಪಿ ಟಿಕೆಟ್ ನೀಡಿದೆ. 3 ಬಾರಿ MLA ಆಗಿರುವ ಕಾಂಗ್ರೆಸ್‌ನ ಅರವಿಂದ್ ಸಿಂಗ್ ಹಾಗೂ ಆಮ್ ಆದ್ಮಿ ಪಕ್ಷದ ಅತಿಶಿ ವಿರುದ್ಧ ಗಂಭೀರ್ ಸ್ಪರ್ಧಿಸುತ್ತಿದ್ದಾರೆ.