
ಬೆಂಗಳೂರು[ಏ. 06] ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಬಿಜೆಪಿ ಹುರಿಯಾಳುಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ
ಏಪ್ರಿಲ್ 9 ರಂದು ಚಿತ್ರದುರ್ಗ ಮತ್ತು ಮೈಸೂರು, 12 ರಂದು ಗಂಗಾವತಿಯಲ್ಲಿ ಸಮಾವೇಶ, 13 ರಂದು ಮಂಗಳೂರು ಮತ್ತು ಬೆಂಗಳೂರು, 18 ರಂದು ಚಿಕ್ಕೋಡಿ ಮತ್ತು ಬಾಗಲಕೋಟೆ ಸಮಾವೇಶದಲ್ಲಿ ಮೋದಿ ಮಾತನಾಡಲಿದ್ದಾರೆ.
ಕರಾವಳಿ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಮೋದಿ ಹವಾ ಎಬ್ಬಿಸಲಿದ್ದಾರೆ. ಮೋದಿ ಆಗಮನ ಸಹಜವಾಗಿಯೇ ರಾಜ್ಯ ರಾಜಕಾರಣದ ಕಾವನ್ನು ಮತ್ತಷ್ಟು ಜಾಸ್ತಿ ಮಾಡಲಿದೆ.