ಮತದಾನಕ್ಕೂ ಮುನ್ನವೇ ಸುಮಲತಾಗೆ ಬಿದ್ದ ಮೊದಲ ಓಟು, ಯಾರಿಂದ?

Published : Apr 06, 2019, 09:37 PM ISTUpdated : Apr 06, 2019, 09:41 PM IST
ಮತದಾನಕ್ಕೂ ಮುನ್ನವೇ ಸುಮಲತಾಗೆ ಬಿದ್ದ ಮೊದಲ ಓಟು, ಯಾರಿಂದ?

ಸಾರಾಂಶ

ಚುನಾವಣೆಗೆ ಮುನ್ನವೇ ಸುಮಲತಾ ಅಂಬರೀಶ್ ಅವರಿಗೆ ಮೊದಲ ಮತ ಬಿದ್ದಿದೆ. ಆದರೆ ಇದನ್ನು ಆಯೋಗ ಯಾವ ರೀತಿಯಲ್ಲಿ ಪರಿಗಣಿಸುತ್ತದೆ ಎಂಬ ಸ್ಪಷ್ಟತೆ ಇಲ್ಲ.

ಬೆಂಗಳೂರು[ಏ. 06]  ‘ಸಹೋದರ ನಾಯಕ್ ನಿಮ್ಮ ಈ ಪ್ರೀತಿಗೆ ನಾನು ಆಭಾರಿ ನಿಜವಾಗಿಯೂ ನಿಮ್ಮಂಥವರ ಈ ಪ್ರೀತಿಯೇ ಇಂದು ನನ್ನನ್ನು ಈ ಹೋರಾಟದ ದಾರಿಯಲ್ಲಿ ಮುಂದುವರಿಯಲು ಶಕ್ತಿ ನೀಡುತ್ತಿರುವುದು. ನಿಮ್ಮ ಈ ಪ್ರೇರಣಾದಾಯಕ ಪತ್ರ ಮತ್ತು ನೀವು ನನಗೆ ಸಲ್ಲಿಸಿರುವ ಗೌರವಕ್ಕೆ ನಾನು ಕೃತಜ್ಞಳು ನಿಮ್ಮ ಹಾರೈಕೆಯನ್ನು ಮಂಡ್ಯದ ಜನ ಖಂಡಿತವಾಗಿಯೂ ಈಡೇರಿಸುತ್ತಾರೆ

ಮಂಡ್ಯವನ್ನು ಸ್ವಾಭಿಮಾನದ ದಿಕ್ಕಿನೆಡೆಗೆ ಕರೆದುಕೊಂಡು ಹೋಗಬೇಕೆಂಬ ನನ್ನ ಮಹದಾಸೆಗೆ ನೀವು ತೋರಿಸಿರುವ ಅಭಿಮಾನ ಮತ್ತು ಪ್ರೀತಿ ಮತ್ತು ಅದೇ ರೀತಿ ನಿಮ್ಮ ಅಣ್ಣ ಅಂಬರೀಶ್ ಬಗ್ಗೆ ನೀವು ಇಟ್ಟುಕೊಂಡಿರುವ ಅಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮಂಡ್ಯದಲ್ಲಿ ಬದಲಾವಣೆಯನ್ನು ಮಾಡಿ ತೋರಿಸುತ್ತೇನೆ .... ಸುಮಲತಾ ಅಂಬರೀಶ್’ ಹೀಗೆ ಸುಮಲತಾ ಅವರು ಬರೆದುಕೊಂಡು ತಮ್ಮ ಫೇಸ್ ಬುಕ್ ನಲ್ಲಿಯೂ ಶೇರ್ ಮಾಡಿದ್ದಾರೆ.

‘ದೇವೇಗೌಡ್ರು ಹೆಗಲಮೇಲೆ ಕೈ ಇಟ್ರೂ ಅಂದ್ರೆ 7 ವರ್ಷ ಭವಿಷ್ಯನೇ ಇಲ್ಲ’

ಸಿಆರ್ ಪಿಎಫ್ ಯೋಧರೊಬ್ಬರು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗೆ ಮತ ಹಾಕಿದ್ದು ಇದೇ ರೀತಿ ಪ್ರತಿಯೊಬ್ಬರು  ಮಾಡಿ  ಮಂಡ್ಯದ ಸ್ವಾಭಿಮಾನ ಕಾಪಾಡಬೇಕು ಎಂದು ಆರ್ ನಾಯಕ್ ಎಂಬುವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದನ್ನು ಸುಮಲತಾ ತಮ್ಮ ವಾಲ್ ನಲ್ಲಿ ಶೇರ್ ಮಾಡಿ ಮೇಲಿನಂತೆ ಬರೆದಿದ್ದಾರೆ.

 

 

 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!