‘ಮೋದಿ ಅಲೆ ಇಲ್ಲದ ಬಿಎಸ್‌ವೈ ವಿರುದ್ಧ ಈಗಾಗಲೇ ನೈತಿಕವಾಗಿ ಗೆದ್ದಿದ್ದೇನೆ’

By Web DeskFirst Published Apr 6, 2019, 8:46 PM IST
Highlights

ಶಿವಮೊಗ್ಗ ದೋಸ್ತಿ ಅಭ್ಯರ್ಥಿ ಮಧು ಬಂಗಾರಪ್ಪ ಮಂಗಳೂರಿನಲ್ಲಿ ಮಾತನಾಡುತ್ತಾ ಬಿಜೆಪಿ  ಮತ್ತು ಯಡಿಯೂರಪ್ಪ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಮಂಗಳೂರು[ಏ. 06]  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೋದಿ ಅಲೆ ವರ್ಕೌಟ್ ಆಗಲ್ಲ. ಬಿಜೆಪಿ ಜಿಲ್ಲೆಯಲ್ಲಿ ಮಾತ್ರವಲ್ಲದೇ, ರಾಜ್ಯದಲ್ಲಿ ನಿರ್ಮೂಲನೆಯಾಗುತ್ತದೆ. ಸಿಎಂ ಸ್ಥಾನ ದೊರಕಿದಾಗ ಯಡಿಯೂರಪ್ಪರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಬಂದು ಕುಮಾರಸ್ವಾಮಿಯವರಿಗೆ ಮುಹೂರ್ತ ಇಡುತ್ತಿದ್ದಾರೆ. ಅವರ ಮುಹೂರ್ತರಿಂದ ಕರಾವಳಿಯಲ್ಲಿ ಬಿಜೆಪಿ ಕೊನೆಗಾಣಲಿದೆ ಎಂದು ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.

ಕರಾವಳಿಯಲ್ಲಿ ಬಿಜೆಪಿ ನಿರ್ಮೂಲನೆಯಾಗಬೇಕಿದೆ. ಈ ಹಿಂದೆಯೂ ಶಿವಮೊಗ್ಗದಲ್ಲಿ ಘಟಾನುಘಟಿಗಳಿದ್ದರು. ಯಡಿಯೂರಪ್ಪ ಹಾಗೂ ಈಶ್ವರಪ್ಪ ಪೂರ್ತಿ ನೆಲಕಚ್ಚಿದ್ದರು. ಆ ಸಂದರ್ಭದಲ್ಲಿ ನನ್ನ ತಂದೆ ಬಂಗಾರಪ್ಪನವರಿಂದ ಬಿಜೆಪಿ ಗೆದ್ದಿತ್ತು. ಯಡಿಯೂರಪ್ಪ ತನ್ನ ಮಕ್ಕಳನ್ನು ಬೆಳೆಸುವ ವ್ಯವಸ್ಥೆ ಮಾಡುತ್ತಿದ್ದರು.  ಆದ್ರೆ, ಕಾಂಗ್ರೆಸ್ ನನಗೆ ಅವಕಾಶ ನೀಡಿ ಟಿಕೆಟ್ ಒದಗಿಸಿತು. ಕಳೆದ ಚುನಾವಣೆಯಲ್ಲಿ ಮೋದಿ ಅವರಿಂದಾಗಿ ಅಷ್ಟು ಮತ ಪಡೆದಿದ್ದರು ಎಂದರು.

75 ವರ್ಷದ ನಿವೃತ್ತಿ ಮಿತಿಗೆ ನಾನೂ ಬದ್ಧ: ನನ್ನ ನಂತರ ಯಾರೆಂಬ ಚಿಂತೆ ಬೇಡ

ಆದರೆ ಈಗ ಬಳಿಕ ಅವರ ಗೆಲುವಿನ‌ ಮತದ ಪ್ರಮಾಣವೂ ಕಡಿಮೆಯಾಗಿದೆ. ಮೋದಿಯವರ ಅಲೆ ಕಡಿಮೆಯಾಗಿದೆ, ಅದಕ್ಕೆ ಗೆಲುವಿನ ಮತದ ಪ್ರಮಾಣ ಕಡಿಮೆಯಾಗಿದೆ. ಘಟಾನುಘಟಿಗಳು ಎಂದು ಹೇಳುವವರ ಮೌಲ್ಯ ಕೂಡಾ ಕಡಿಮೆಯಾಗಿದೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಬಗ್ಗೆ ಯಾರಿಗೂ ಭಯವಿಲ್ಲ. ಚುನಾವಣೆಗೆ ಯಾರು ಕೂಡಾ ಸ್ಪರ್ಧಿಸಬಹುದು. ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸಲಾಗಿದೆ. ಅವರು ಗೆಲ್ತಾರೆಂದು ನನಗೆ ನಂಬಿಕೆಯಿದೆ ೆಂದರು.

ಶಿವಮೊಗ್ಗದಲ್ಲಿ ನಾನು ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಿದ್ದೇನೆ. ಹಿಂದೆ 52  ಸಾವಿರ ಮತದಿಂದ ನಾನು ಸೋತಿರಬಹುದು ಆದರೆ  ನೈತಿಕವಾಗಿ ನಾನು ಗೆದ್ದಿದ್ದೇನೆ ಎಂದು ಹೇಳಿದರು.

click me!