
ನಾಂದೇಡ್(ಏ.07): ಕಾಂಗ್ರೆಸ್ ಪಕ್ಷವನ್ನು ಟೈಟಾನಿಕ್ ಹಡಗಿಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, 2019ರ ಲೋಕಸಭಾ ಚುನಾವಣೆ ಎಂಬ ಸಮುದ್ರದಲ್ಲಿ ಈ ಹಡಗು ಮುಳುಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಸ್ವಾತಂತ್ರ್ಯದ ನಂತರ ದೇಶವನ್ನು ಸುಮಾರು 6 ದಶಕಗಳವರೆಗೆ ಆಳಿದ ಕಾಂಗ್ರೆಸ್ ಈ ಬಾರಿ ಟೈಟಾನಿಕ್ ಹಡಗಿನಂತೆ ಮುಳುಗಲಿದೆ ಎಂದು ವ್ಯಂಗ್ಯವಾಡಿದರು.
ಅದೇ ರೀತಿ ಕಾಂಗ್ರೆಸ್‌ನೊಂದಿಗೆ ಸವಾರಿ ಮಾಡುತ್ತಿರುವ ಎನ್‌ಸಿಪಿಯಂತ ಪಕ್ಷಗಳು, ಜೀವ ಉಳಿಸಿಕೊಳ್ಳಲು ಓಡಿ ಹೋಗುವ ದಿನ ದೂರವಿಲ್ಲ ಎಂದೂ ಪ್ರಧಾನಿ ಭವಿಷ್ಯ ನುಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 44 ಸೀಟುಗಳನ್ನು ಗಳಿಸಿದ್ದ ಕಾಂಗ್ರೆಸ್, ಈ ಬಾರಿ ಸಂಪೂರ್ಣವಾಗಿ ನೆಲ ಕಚ್ಚಲಿದ್ದು, ಜನ ಈ ಬಾರಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.