ವಿಡಿಯೋ ಗೇಮ್ ಅಲ್ಲ: ಕಾಂಗ್ರೆಸ್ ಪ್ರತಿಪಾದಿತ ಸರ್ಜಿಕಲ್ ಸ್ಟ್ರೈಕ್ ಲೇವಡಿ!

Published : May 03, 2019, 08:52 PM IST
ವಿಡಿಯೋ ಗೇಮ್ ಅಲ್ಲ: ಕಾಂಗ್ರೆಸ್ ಪ್ರತಿಪಾದಿತ ಸರ್ಜಿಕಲ್ ಸ್ಟ್ರೈಕ್ ಲೇವಡಿ!

ಸಾರಾಂಶ

ಯುಪಿಎ ಅವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್| ಕಾಂಗ್ರೆಸ್ ಪ್ರತಿಪಾದನೆ ಲೇವಡಿ ಮಾಡಿದ ಪ್ರಧಾನಿ ಮೋದಿ| ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದ ಪ್ರಧಾನಿ ಮೋದಿ| ‘ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ಮೀ ಟೂ ಎನ್ನುತ್ತಿದೆ’|

ಸಿಕಾರ್‌(ಮೇ.03): ಯುಪಿಎ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

ರಾಜಸ್ಥಾನದ ಸಿಕಾರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಸುಳ್ಳುಗಳ ಸರಮಾಲೆ ಪೋಣಿಸುವುದರಲ್ಲಿ ನಿಸ್ಸೀಮ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಮೊದಲು ವ್ಯಂಗ್ಯವಾಡಿತ್ತು. ನಂತರ ವಿರೋಧ ವ್ಯಕ್ತಪಡಿಸಿ, ಇದೀಗ 'ಮೀ ಟೂ' ಎನ್ನುತ್ತಿದೆ ಎಂದು ಮೋದಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಕೇವಲ ಪೇಪರ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರಬಹುದು ಎಂದಿರುವ ಮೋದಿ, ಪುಲ್ವಾಮಾ ದಾಳಿ ಬಳಿಕ ನಡೆದ ವಾಯುದಾಳಿ ಕುರಿತು ಕಾಂಗ್ರೆಸ್ ವಿರೋಧಿಸಿತ್ತು ಎಂದು ಹರಿಹಾಯ್ದರು.

ಈ ಹಿಂದೆ ಮೂರು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದಿದ್ದ ಕಾಂಗ್ರೆಸ್ ಇದೀಗ ಆರು ಬಾರಿ ಮಾಡಿದ್ದಾಗಿ ಹೇಳುತ್ತಿದೆ. ಮುಮದಿನ ದಿನಗಳಲ್ಲಿ ಇದು 600 ಕೂಡ ಆಗಬಹುದು ಎಂದು ಮೋದಿ ಕುಹುಕವಾಡಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!