ಡಿನ್ನರ್ ವಿಡಿಯೋ ತೆಗೆಸಿದ್ದು ಯಾರು? ಮುಖಂಡನಿಂದ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಾದ ಸತ್ಯ

Published : May 03, 2019, 08:48 PM IST
ಡಿನ್ನರ್ ವಿಡಿಯೋ ತೆಗೆಸಿದ್ದು ಯಾರು? ಮುಖಂಡನಿಂದ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಾದ ಸತ್ಯ

ಸಾರಾಂಶ

ಡಿನ್ನರ್ ವಿಡಿಯೋ ಪ್ರತಿ ದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರಿಗೆ ವಿಡಿಯೋ ಕುರಿತಾಗಿ ಚೆಲುವರಾಯಸ್ವಾಮಿ ವಿವರಣೆ ನೀಡಿದ್ದಾರೆ.

ಬೆಂಗಳೂರು[ಮಾ. 02] ಡಿನ್ನರ್ ವಿಡಿಯೋ ಹಿಂದಿನ  ಅಸಲಿ ಕತೆ ಪತ್ತೆಹಚ್ಚಲು ಸ್ವತಃ ಕೆಪಿಸಿಸಿ ಅಧ್ಯಕ್ಷರೇ ಅಖಾಡಕ್ಕೆ ಇಳಿದಿದ್ದಾರೆ.  ವಿಡಿಯೋ ರಿಲೀಸ್ ಅಸಲಿ ಕಥೆ ತಿಳಿಯಲು ಮುಂದಾದ ದಿನೇಶ್ ಗುಂಡೂರಾವ್ ಚೆಲುವರಾಯಸ್ವಾಮಿ ಬುಲಾವ್ ನೀಡಿದ್ದು ಚೆಲುವರಾಯಸ್ವಾಮಿ ಆಗಮಿಸಿ ವಿವರಣೆ ನೀಡಿದ್ದಾರೆ.

ವಿಡಿಯೋ ಬಿಡುಗಡೆ ಮಾಡಿಸಿದ್ದೇ ಸಿಎಂ ಕುಮಾರಸ್ವಾಮಿ.  ಪೊಲೀಸರನ್ನ ಕರೆದು ಸೂಚನೆ ಕೊಟ್ಟಿದ್ದೇ ಸಿಎಂ.. ಖಾಸಗಿ ಹೊಟೇಲ್ ಮಾಲೀಕರ ಮೇಲೆ ದಬ್ಬಾಳಿಕೆ ನಡೆಸಿ ವಿಡಿಯೋ ತೆಗೆದಿದ್ದಾರೆ ಎಂದು  ಚೆಲುವರಾಯಸ್ವಾಮಿ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

ನಾವು ಯಾವುದೇ ಕಾರಣಕ್ಕೂ ಸುಮಲತಾ ಪರವಾಗಿ ಕೆಲಸ ಮಾಡಿಲ್ಲ.. ಹುಟ್ಟು ಹಬ್ಬದ ದಿನ ಅಂತ ಊಟಕ್ಕೆ ಸೇರಿದ್ವಿ ಅದು ಬಿಟ್ರೆ ಅದಕ್ಕೂ ಮೊದಲು ನಾವು ಸುಮಲತಾ ಜತೆ ಚರ್ಚೆ ಮಾಡಿಲ್ಲ.. ಬೇಕು ಅಂತ ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಅವರದ್ದು ಒಂದೇ ಅಜೆಂಡಾ ಮಂಡ್ಯದಲ್ಲಿ ಕಾಂಗ್ರೆಸ್ ಮುಗಿಸಬೇಕು ಅಂತ.. ಇದೆಲ್ಲಾ ತಿಳಿದುಕೊಂಡು ನೀವು ಏನು ಕ್ರಮ ಬೇಕಿದ್ರೂ ನಮ್ಮ ವಿರುದ್ಧ ತೆಗೆದುಕೊಳ್ಳಬಹುದು ಎಂದು ದಿನೇಶ್ ಗೆ ವರದಿ ಒಪ್ಪಿಸಿ ತೆರಳಿದ್ದಾರೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!