ನಾನೂ ತಾಯಿ: ಸ್ಮೃತಿ ಇರಾನಿಗೆ ಪ್ರಿಯಾಂಕಾ ಗಾಂಧಿ ಪ್ರತ್ಯುತ್ತರ!

Published : May 03, 2019, 07:34 PM IST
ನಾನೂ ತಾಯಿ: ಸ್ಮೃತಿ ಇರಾನಿಗೆ ಪ್ರಿಯಾಂಕಾ ಗಾಂಧಿ ಪ್ರತ್ಯುತ್ತರ!

ಸಾರಾಂಶ

ಪ್ರಧಾನಿ ಮೋದಿ ಕುರಿತು ಮಕ್ಕಳಿಂದ ಅವಹೆಳನಕಾರಿ ಪದ ಬಳಕೆ| ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದ ಸ್ಪಷ್ಟನೆ| ಪ್ರಿಯಾಂಕಾ ವಿರುದ್ಧ ಹರಿಹಾಯ್ದಿದ್ದ ಸ್ಮೃತಿ ಇರಾನಿ| ‘ನಾನೂ ತಾಯಿ’..ಎಂದು ಪ್ರಿಯಾಂಕಾ ತಿರುಗೇಟು| ರಾಷ್ಟ್ರೀಯ ಮಕ್ಕಳ ಹಕ್ಕು  ರಕ್ಷಣೆ ಪ್ರಾಧಿಕಾರದಿಂದ ಪ್ರಿಯಂಕಾಗೆ ನೋಟಿಸ್|

ನವದೆಹಲಿ(ಮೇ.03): ಮಕ್ಕಳ ಗುಂಪೊಂದು ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದ ಪೂರ್ವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿಡಿಯೋ ವೈರಲ್ ಆಗಿತ್ತು.

ಈ ವಿಡಿಯೋ ಟೀಕಿಸಿದ್ದ ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ, ಗೌರವಸ್ಥ ಕುಟುಂಬಸ್ಥರು ತಮ್ಮ ಮಕ್ಕಳನ್ನು ಪ್ರಿಯಾಂಕಾ ಗಾಂಧಿ ಅವರಿಂದ ದೂರ ಇಡಬೇಕು ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ , ‘ನಾನೂ ತಾಯಿಯಾದ ಕಾರಣ ಮಕ್ಕಳು ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದೇನೆ..’ ಎಂದು ಹೇಳಿದ್ದಾರೆ.

ನಾನು ಇಡೀ ಜೀವನವನ್ನು ಮಕ್ಕಳ ಪಾಲನೆ ಪೋಷಣೆಯಲ್ಲೇ ಕಳೆದಿದ್ದು, ಮಕ್ಕಳಿಗೆ ಯಾವ ರೀತಿಯ ಸಂಸ್ಕೃತಿ ನೀಡಬೇಕು ಎಂಬುದು ಗೊತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಚುನವಣಾ ಪ್ರಚಾರದ ವೇಳೆ ಮಕ್ಕಳ ಗುಂಪೊಂದನ್ನು ಭೇಟಿ ಮಾಡಿದ್ದ ಪ್ರಿಯಾಂಕಾ ಗಾಂಧಿ, ಈ ವೇಳೆ ಪ್ರಧಾನಿ ಮೋದಿ ಕುರಿತು ಮಕ್ಕಳು ಅವಹೇಳನಕಾರಿ ಪದ ಬಳಸುವುದನ್ನು ತಡೆದಿದ್ದರು. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕು  ರಕ್ಷಣೆ ಪ್ರಾಧಿಕಾರ ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!