‘ಉಗ್ರರನ್ನು ಕೊಲ್ಲಲು ಸೈನಿಕರು ಆಯೋಗದ ಅನುಮತಿ ಪಡೆಯಬೇಕೆ’?

By Web DeskFirst Published May 12, 2019, 2:47 PM IST
Highlights

‘ಉಗ್ರರನ್ನು ಕೊಲ್ಲಲೂ ಚುನಾವಣಾ ಆಯೋಗದ ಅನುಮತಿ ಕೇಳಬೇಕಾ’|ಪ್ರತಿಪಕ್ಷಗಳ ಕುರಿತು ಲೇವಡಿ ಮಾಡಿದ ಪ್ರಧಾನಿ ಮೋದಿ| ಉತ್ತರಪ್ರದೇಶದ ಕುಶಿನಗರದಲ್ಲಿ ಪ್ರಧಾನಿ ಮೋದಿ ಪ್ರಚಾರ| ಕಾಶ್ಮೀರ ಸೋಪಿಯಾನ ಎನ್‌ಕೌಂಟರ್ ಪ್ರಸ್ತಾಪಿಸಿದ ಮೋದಿ| 

ಕುಶಿನಗರ್(ಮೇ.12): ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರಪ್ರದೇಶದ ಕುಶಿನಗರದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಶ್ಮೀರದ ಸೋಪಿಯಾನ ಪ್ರದೇಶದಲ್ಲಿ ಇಂದು ನಡೆದ ಇಬ್ಬರು ಉಗ್ರರ ಎನ್‌ಕೌಂಟರ್ ಕುರಿತು ಪ್ರಸ್ತಾಪಿಸಿದರು. 

PM Modi in Kushinagar: Today terrorists were killed by our Army in Kashmir. Now some people are worried as to why did Modi kill the terrorists when voting is underway? An armed terrorist is attacking,do my jawans go to the Election Commission to seek permission to kill him? pic.twitter.com/ZfcovjRt1V

— ANI UP (@ANINewsUP)

ಎಲ್ಲದಕ್ಕೂ ಚುನಾವಣಾ ಆಯೋಗದತ್ತ ಬೊಟ್ಟು ಮಾಡುತ್ತಿರುವ ಪ್ರತಿಪಕ್ಷಗಳು, ಸೈನಿಕರೂ ಕೂಡ ಆಯೋಗದ ಅನುಮತಿ ಪಡೆಯಬೇಕು ಎಂದು ಬಯಸಿದರೆ ಅಚ್ಚರಿಯಿಲ್ಲ ಮೋದಿ ವ್ಯಂಗ್ಯವಾಡಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
 

click me!