6ನೇ ಹಂತದ ಮತದಾನ ಪ್ರಕ್ರಿಯೆ: ಸರತಿ ಸಾಲಿನಲ್ಲಿ ಗಣ್ಯರು!

By Web DeskFirst Published May 12, 2019, 1:09 PM IST
Highlights

6ನೇ ಹಂತದ ಮತದಾನ ಪ್ರಕ್ರಿಯೆ ಆರಂಭ| ಒಟ್ಟು 7 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳು| ಮತದಾನದ ಹಕ್ಕು ಚಲಾಯಿಸಿದ ಗಣ್ಯರು| ರಾಷ್ಟ್ರಪತಿ ಭವನದಲ್ಲಿ ಮತದಾನ ಮಾಡಿದ ರಾಮನಾಥ್ ಕೋವಿಂದ್| ಸೋನಿಯಾ, ಸುಷ್ಮಾ, ಅರವಿಂದ್, ರಾಹುಲ್, ಪ್ರಿಯಾಂಕಾ ಅವರಿಂದಲೂ ಮತದಾನ| ಸರತಿ ಸಾಲಿನಲ್ಲಿ ನಿಮತು ಮತ ಚಲಾಯಿಸಿದ ವಿರಾಟ್ ಕೊಹ್ಲಿ| 111 ವರ್ಷದ ವೃದ್ಧ ಬಚ್ಚನ್ ಸಿಂಗ್ ಅವರಿಂದ ಮತದಾನ|   

ನವದೆಹಲಿ(ಮೇ.12): ಲೋಕಸಭೆಗೆ ಇಂದು 6ನೇ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಷ್ಟ್ರ ರಾಜಧಾನಿ ಸೇರಿದಂತೆ ಒಟ್ಟು 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ನವದೆಹಲಿಯಲ್ಲಿ ಇಂದು ಹಲವಾರು ಗಣ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ತಮ್ಮ ಮತದಾನದ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಗೊಳಿಸಿದರು.

Delhi: President Ramnath Kovind casts his vote at a polling booth in Rashtrapati Bhawan pic.twitter.com/O14Q2yZQzt

— ANI (@ANI)

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ತಮ್ಮ ಮತ ಚಲಾಯಿಸಿದರು.

Delhi: UPA Chairperson Sonia Gandhi arrives to cast her vote at a polling booth in Nirman Bhavan. pic.twitter.com/1le3Vthj4n

— ANI (@ANI)

ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ನಿರ್ಮಾಣ ಭವನ್ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Delhi: Earlier visuals of Priyanka Gandhi Vadra and Robert Vadra casting their vote at a polling booth in Sardar Patel Vidyalaya at Lodhi Estate pic.twitter.com/BNssOoIAQq

— ANI (@ANI)

ಪೂರ್ವ ಉತ್ತರಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಲೋದಿ ಎಸ್ಟೇಟ್ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಈ ವೇಳೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ಕೂಡ ಮತ ಚಲಾಯಿಸಿದರು.

Delhi: External Affairs Minister Sushma Swaraj after casting her vote at a polling booth in NP Senior Secondary School in Aurangzeb Lane. pic.twitter.com/OwqUzkY7Lt

— ANI (@ANI)

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಔರಂಗ್‌ಜೇಬ್ ಲೇನ್ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Delhi Chief Minister Arvind Kejriwal casts his vote at a polling booth in Civil Lines. pic.twitter.com/AtVTdUMItm

— ANI (@ANI)

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಿವಿಲ್ ಲೈನ್ ಬಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

Delhi: Congress President Rahul Gandhi arrives to cast his vote at a polling booth in NP Senior Secondary School in Aurangzeb Lane. pic.twitter.com/KH6ngS7GqF

— ANI (@ANI)

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಕೂಡ ಮತದಾನ ಮಾಡಿ ಗಮನ ಸೆಳೆದರು.

Haryana: Team India Captain Virat Kohli after casting his vote at a polling booth in Pinecrest School in Gurugram pic.twitter.com/z3vzJvxWSp

— ANI (@ANI)

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಗುರುಗ್ರಾಮ್ ಬಳಿಯ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

Delhi's oldest voter, 111-year old Bachan Singh after casting his vote at a polling booth in Sant Garh. pic.twitter.com/RP6MIAsk5B

— ANI (@ANI)

ಇನ್ನು ಸಂತ್ ಗರ್ ಮತಗಟ್ಟೆಯಲ್ಲಿ 111 ವರ್ಷದ ಬಚ್ಚನ್ ಸಿಂಗ್ ಮತದಾನ ಮಾಡಿದರು. ಇವರು ದೆಹಲಿಯ ಅತ್ಯಂತ ಹಿರಿಯ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Lok Sabha Election 2019: Total 25.13% voting till 12 noon in . West Bengal- 38.26, Delhi-19.55, Haryana- 23.26 Uttar Pradesh- 21.75, Bihar- 20.70, Jharkhand- 31.27, Madhya Pradesh- 28.25 pic.twitter.com/SOtZ8zbNjU

— ANI (@ANI)

12 ಗಂಟೆವರೆಗೂ ಶೇ. 25.13ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಲೋಕಸಭೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!