’ಬೇಸಿಗೆ ಬಿಸಿ ಒಂಚೂರು ಏರಿದ್ರೆ ರಜಾಕ್ಕೆ ತೆರಳುವ ಪ್ರಧಾನಿ ಬೇಕಾ?’

Published : May 08, 2019, 09:20 PM ISTUpdated : May 08, 2019, 09:30 PM IST
’ಬೇಸಿಗೆ ಬಿಸಿ ಒಂಚೂರು ಏರಿದ್ರೆ ರಜಾಕ್ಕೆ ತೆರಳುವ ಪ್ರಧಾನಿ ಬೇಕಾ?’

ಸಾರಾಂಶ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರ ಮೇಲೆ ವಾಗ್ದಾಳಿ ಮಾಡುತ್ತ ಮೋದಿ ಮುಂದಿನ ಅವಧಿಗೆ ಯಾಕೆ ಪ್ರಧಾನಿಯಾಗಬೇಕು ಎಂಬುದನ್ನು ಹೇಳಿದ್ದಾರೆ. 

ಧನ್ ಬಾದ್[ಮೇ. 08] ನಾನು ಈ ಲೋಕಸಭಾ ಚುನಾವಣೆ ಸಂದರ್ಭ ಇಡೀ ದೇಶವನ್ನು ಸುತ್ತಾಡಿದ್ದೇನೆ. ದೇಶವನ್ನು ಅವರ ಸಂಸ್ಕೃತಿ ಮತ್ತು ಅಭಿರುಚಿಗಳ ಆಧಾರದ ಮೇಲೆ ಒಡೆಯಲಾಗಿದೆ ಆದರೆ ಅವರನ್ನೆಲ್ಲ ಮೋದಿ ಎನ್ನುವ ಹೆಸರೊಂದು ಒಂದು ಮಾಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

ವಿಪಕ್ಷಗಳ ‘ಲವ್ ಡಿಕ್ಷನರಿ’ಯಲ್ಲಿನ ದ್ವೇಷ ಬಿಚ್ಚಿಟ್ಟ ಪ್ರಧಾನಿ ಮೋದಿ!

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ 55 ವರ್ಷಗಳಲ್ಲಿ ಮಾಡಲಾಗದ್ದನ್ನು ಮೋದಿ ಸರ್ಕಾರ 5 ವರ್ಷದಲ್ಲಿ ಮಾಡಿ  ತೋರಿಸಿದೆ ಎಂದರು.

20 ವರ್ಷಗಳಲ್ಲಿ ಮೋದಿ ಒಂದೇ ಒಂದು ರಜಾ ತೆಗೆದುಕೊಂಡಿಲ್ಲ. ಅದೇ ಬೇಸಿಗೆಯ ಬಿಸಿಲು ಒಂದು ಚೂರು ಜಾಸ್ತಿ ಆದರೆ ಸಾಕು ಕಾಂಗ್ರೆಸ್ ಅಧ್ಯಕ್ಷರು ರಜಾ ದಿನಕ್ಕೆಂದು ತೆರಳುತ್ತಾರೆ ಎನ್ನುವ ಮುಖೇನ ರಾಹುಲ್ ಗಾಂಧಿ ಅವರನ್ನು ಕುಟುಕಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!