ಚುನಾವಣಾ ಹೊಸ್ತಿಲಲ್ಲೇ ಬಿಗ್ ಶಾಕ್ : ಹಾಲಿ ಶಾಸಕ ಬಿಜೆಪಿಗೆ

By Web DeskFirst Published Mar 15, 2019, 2:05 PM IST
Highlights

ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಗ್ ಶಾಕ್ ಎದುರಾಗಿದೆ. ಸ್ವ ಪಕ್ಷಕ್ಕೆ ಬಿಗ್ ಶಾಕ್ ನೀಡಿ ಹಾಲಿ ಶಾಸಕರೋರ್ವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ನವದೆಹಲಿ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕ ಅರ್ಜುನ್‌ ಸಿಂಗ್‌ ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯ ಅರ್ಜುನ್‌ ಸಿಂಗ್‌, ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ನಾಯಕ ದಿನೇಶ್‌ ತ್ರಿವೇದಿ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಇದೆ. 

ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಫೈನಲ್ ?

ಈ ಹಿಂದೆ ಮಮತಾರ ಆಪ್ತ ಮುಕುಲ್‌ ರಾಯ್‌ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರ್ಪಡೆ ಬಳಿಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಅರ್ಜುನ್‌ ಸಿಂಗ್‌, ‘ಸಿಎಂ ಮಮತಾಗಾಗಿ ನಾನು 30 ವರ್ಷಗಳನ್ನು ತ್ಯಾಗ ಮಾಡಿದ್ದೇನೆ. ಆದರೆ, ಅವರು ಪುಲ್ವಾಮಾ ದಾಳಿ ಕುರಿತು ನೀಡಿದ ಹೇಳಿಕೆಯಿಂದ ನಾನು ದಿಗ್ಭ್ರಮೆಯಾಗಿದ್ದೆ. 

ಗಡ್ಕರಿ ಮೊದಲ ಚುನಾವಣೆ ಗೆದ್ದಿದ್ದು 2014ರಲ್ಲಿ!

ಇನ್ನು ವಾಯುಪಡೆ ಸರ್ಜಿಕಲ್‌ ದಾಳಿ ನಡೆಸಿದಾಗಲೂ, ಉಗ್ರರ ಶವಗಳನ್ನು ತೋರಿಸುವಂತೆ ಪಟ್ಟು ಹಿಡಿದಿದ್ದರು. ದೇಶದ ಹಿತಾಸಕ್ತಿಯನ್ನೇ ಪ್ರಶ್ನೆ ಮಾಡುವಂಥ ನಾಯಕರು ಮತದಾರರಿಗಾಗಿ ಒಳ್ಳೆ ಕೆಲಸ ಮಾಡಲು ಹೇಗೆ ಸಾಧ್ಯ,’ ಎಂದು ಕಿಡಿಕಾರಿದರು.

click me!