‘ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಬಿಜೆಪಿಯೇತರ ಸರ್ಕಾರ’

By Web DeskFirst Published May 16, 2019, 3:18 PM IST
Highlights

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು, ಇದೇ ವೇಳೆ ಭವಿಷ್ಯವೊಂದು ನುಡಿಯಲಾಗಿದೆ. ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ಹೇಳಲಾಗಿದೆ.

ಪಾಟ್ನಾ : ಲೋಕಸಭಾ ಚುನಾವಣೆ ಫಲಿತಾಂಶಕ್ಕೆ  ದಿನಗಣನೆ ಆರಂಭವಾಗಿದೆ.  NDA ಮತ್ತೆ ಅಧಿಕಾರಕ್ಕೆ ಏರುವ ಯತ್ನದಲ್ಲಿದ್ದರೆ  ಅತ್ತ UPA  ಅಧಿಕಾರ ಪಡೆಯಲು ಪ್ರಯತ್ನಿಸುತ್ತಿದೆ. 

ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್ ಇದೇ ವೇಳೆ ಚುನಾವಣಾ ಫಲಿತಾಂಶದ ಭವಿಷ್ಯ ನುಡಿದಿದ್ದು, ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ. ಬಿಜೆಪಿಯೇತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ  ಎಂದಿದ್ದಾರೆ. 

ಸದ್ಯ ದೇಶದಲ್ಲಿ ಒಂದು ಹಂತದ ಚುನಾವಣೆಯಷ್ಟೇ ಬಾಕಿ ಉಳಿದಿದ್ದು, ದೇಶದಾದ್ಯಂತ ಚುನಾವಣಾ ಪ್ರಚಾರದಲ್ಲಿ  ಪಾಲ್ಗೊಂಡಾಗ ಆದ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ ಎಂದರು. 

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 300 ಸೀಟು : ಭವಿಷ್ಯ

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ. ಕೈ ಮುಖಂಡರು ಪ್ರಧಾನಿ ಪಟ್ಟಕ್ಕೆ ಏರಲಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದುಕೊಂಡಿದ್ದು, ಈ ಬಾರಿ 125ಕ್ಕೆ ಇಳಿಯಲಿದೆ. 

2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಏರಿದ್ದು, ಆದರೆ ಜನರಿಗೆ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಗುಲಾಮ್ ನಬಿ ಆಜಾದ್ ಆರೋಪಿಸಿದರು.

click me!