ರಾಹುಲ್ ಓರ್ವ ಫಿರಂಗಿ, ನಾನವರ ಎಕೆ-47: ಸಿಧು!

By Web DeskFirst Published May 16, 2019, 1:46 PM IST
Highlights

ರಾಹುಲ್ ಗಾಂಧಿ ಫಿರಂಗಿಯಾದರೆ ನಾನವರ ಎಕೆ-47| ಹಿಮಾಚಲ ಪ್ರದೇಶದಲ್ಲಿ ಅಬ್ಬರಿಸಿದ ನವಜೋತ್ ಸಿಧು| ‘ಗಂಗಾ ಪುತ್ರ ಎಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ರಫೆಲ್ ಏಜೆಂಟ್ ಆಗಿದ್ದಾರೆ’| ರಫೆಲ್ ಒಪ್ಪಂದದಲ್ಲಿ ಮೋದಿ ತಿಂದು ತೇಗಿದ್ದು ಇಡೀ ದೇಶಕ್ಕೆ ಗೊತ್ತು ಎಂದ ಸಿಧು| ರಫೆಲ್ ಹಗರಣದ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ|

ಬಿಲಾಸ್‌ಪುರ್(ಮೇ.16): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ ಇದ್ದ ಹಾಗೆ ಹಾಗೂ ನಾನು ಅವರ ಎಕೆ-47 ಇದ್ದ ಹಾಗೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಹೇಳಿದ್ದಾರೆ.

ಹಿಮಾಚಲಪ್ರದೇಶದ ಬಿಲಾಸ್‌ಪುರ್ ದಲ್ಲಿ ಮಾತನಾಡಿದ ಸಿಧು, 2014ರಲ್ಲಿ ಗಂಗಾ ಪುತ್ರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ, 2019ರಲ್ಲಿ ರಫೆಲ್ ಏಜೆಂಟ್ ಎಂಬ ಹಣೆಪಟ್ಟಿ ಹೊತ್ತು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಕಿಡಿಕಾರಿದರು.

Navjot Singh Sidhu, Congress, in Bilaspur, Himachal: Main tumse poochhta hoon Narendra Modi. Rafale deal mein tumne dalali ki ya nahi? Tum behes kar lo Sidhu ke saath saare desh mein kahin pe bhi baith ke. Rahul ji to bahut badi baat hai, wo to top hai, main AK-47 hoon. (15.05) pic.twitter.com/j80TPkVq2c

— ANI (@ANI)

ಇದೇ ವೇಳೆ ರಫೆಲ್ ಹಗರಣದ ಕುರಿತು ದೇಶದ ಯಾವುದೇ ಭಾಗದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಸಿಧು ಸವಾಲೆಸೆದರು. 

ನಾ ಖಾವುಂಗಾ, ನಾ ಖಾನೆ ದೂಂಗಾ(ಭ್ರಷ್ಟಾಚಾರ ಮಾಡಲ್ಲ, ಮಾಡಲು ಬಿಡುವುದಿಲ್ಲ) ಎಂದು ಪೋಸು ಕೊಡುವ ಪ್ರಧಾನಿ ಮೋದಿ, ರಫೆಲ್ ಒಪ್ಪಂದದಲ್ಲಿ ತಿಂದು ತೇಗಿದ್ದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಸಿಧು ಹರಿಹಾಯ್ದರು.

NS Sidhu: Main tumhe chunauti deta hoon Narendra Modi, isi pe behes kar lo 'Na khaunga na khane dunga'. Yadi Sidhu haar gaya to rajniti sada ke liye chhodd ke jaega...Main kehta hoon Narendra Modi aaye they 2014 mein Ganga ke lal banke aur jaoge 2019 mein Rafale ke dalal ban ke. https://t.co/evxzHFCwY1

— ANI (@ANI)

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

click me!