'ನನಗೆ ಮತ ಹಾಕದಿದ್ದರೂ ಮುಸ್ಲಿಮರಿಗೆ ನೆರವಾಗುವೆ'

By Web DeskFirst Published Apr 23, 2019, 7:28 AM IST
Highlights

ನೀವು ನನಗೆ ಮತ ನೀಡಿದರೆ ಖುಷಿಯಾಗುತ್ತದ| ಒಂದು ವೇಳೆ ನನಗೆ ಮತ ಹಾಕದಿದ್ದರೂ ಮುಸ್ಲಿಮರಿಗೆ ನೆರವಾಗುವೆ| ವರುಣ್ ಗಾಂಧಿ ಹೇಳಿಕೆ

ಫಿಲಿಬೀತ್‌[ಏ.23]: ಮುಸ್ಲಿಂ ಮತದಾರರ ಕುರಿತು ಬೆದರಿಕೆ ರೂಪದಲ್ಲಿ ಕೇಂದ್ರ ಸಚಿವೆ ಮನೇಕಾ ಗಾಂಧಿ ನೀಡಿದ್ದ ಹೇಳಿಕೆ ಬೆನ್ನಲ್ಲೇ ಇದೀಗ ಅವರ ಮಗ ವರುಣ್‌ ಗಾಂಧಿ ತದ್ವಿರುದ್ಧ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.

ನನಗೆ ಮತ ಹಾಕಿದ ಗ್ರಾಮಕ್ಕೆ ಮಾತ್ರ ಅಭಿವೃದ್ಧಿ: ಮನೇಕಾ!

ಮುಸ್ಲಿಂ ಸಹೋದರರಿಗೆ ಹೇಳುವುದೇನೆಂದರೆ ನೀವು ನನಗೆ ಮತ ನೀಡಿದರೆ ಖುಷಿಯಾಗುತ್ತದೆ. ನೀವು ಮತ ಹಾಕದಿದ್ದರೂ ಏನೂ ಸಮಸ್ಯೆ ಇಲ್ಲ, ನೀವು ನಿಮ್ಮ ಕೆಲಸಕ್ಕಾಗಿ ನನ್ನ ಬಳಿ ಬರಬಹುದು ಎಂದಿದ್ದಾರೆ. ನಿಮ್ಮ ಮತದಿಂದ ನನ್ನ ಗೆಲುವು ಮತ್ತಷ್ಟುಖಚಿತವಾಗಲಿದೆ. ಮತ ನೀಡಿದರೆ ಚಹ ಮತ್ತಷ್ಟುಸಿಹಿಯಾಗಲಿದೆ ಎಂಬರ್ಥದಲ್ಲಿ ಸಕ್ಕರೆ ಮತ್ತು ಚಹದ ಹೋಲಿಕೆ ನೀಡಿದ್ದಾರೆ.

ನನಗೆ ಮತ ಹಾಕದಿದ್ರೆ ಕೆಲಸ ಕೇಳಿ ಬರಬೇಡಿ: ಮುಸ್ಲಿಮರಿಗೆ ಮನೇಕಾ ಗಾಂಧಿ ಎಚ್ಚರಿಕೆ

ಪ್ರಸಕ್ತ ಲೋಕಾ ಚುನಾವಣೆಯಲ್ಲಿ ಫಿಲಿಬಿತ್‌ ಮತ್ತು ಸುಲ್ತಾನ್‌ಪುರ ಕ್ಷೇತ್ರಗಳು ತಾಯಿ-ಮಗನ ಮಧ್ಯ ಅದಲು-ಬದಲಾಗಿವೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28

click me!