ಸುಮಲತಾಗೆ ನನ್ನ ಬೆಂಬಲ ಎಂದ ತಿಥಿ ಚಿತ್ರದ ಗಡ್ಡಪ್ಪ

Published : Apr 13, 2019, 03:31 PM IST
ಸುಮಲತಾಗೆ ನನ್ನ ಬೆಂಬಲ ಎಂದ ತಿಥಿ ಚಿತ್ರದ ಗಡ್ಡಪ್ಪ

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ದರ್ಶನ್ ತಿಥಿ ಸಿನಿಮಾ ಖ್ಯಾತಿ ಗಡ್ಡಪ್ಪ ಅವರ ಮನೆಗೆ ಹೋಗಿ ಮತಯಾಚಿಸಿದರು. ಇದಕ್ಕೆ ಗಡ್ಡಪ್ಪ ಏನಂದ್ರು ನೋಡಿ..

ಮಂಡ್ಯ, (ಏ.13): ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿರುವ ದರ್ಶನ್,​ ತಿಥಿ ಸಿನೆಮಾ ಖ್ಯಾತಿಯ ಗಡ್ಡಪ್ಪ ಅವರ ಮನೆಗೆ ಹೋಗಿ ಸುಮಲತಾಗೆ ವೋಟು ಹಾಕುವಂತೆ ಮನವಿ ಮಾಡಿದರು.

ಮಂಡ್ಯದ ನೊದೆಕೊಪ್ಪಲು ಗ್ರಾಮದಲ್ಲಿರುವ ಗಡ್ಡಪ್ಪ ಮನೆಗೆ ತೆರಳಿ ಸುಮಲತಾ ಅವರಿಗೆ ವೋಟ್ ಹಾಕುವಂತೆ ದರ್ಶನ್ ಕೇಳಿಕೊಂಡರು.

ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಡಪ್ಪ, ದರ್ಶನ್ ಭೇಟಿ ಮಾಡಿದ್ದು ಬಹಳ ಸಂತೋಷ ಆಗಿದೆ. ಸುಮಲತಾ ಪರ ಮತ ಹಾಕಲು ದರ್ಶನ್ ಹೇಳಿದ್ರು. ನಾನು ಸುಮಲತಾ ಅವರಿಗೇ ಮತ ಹಾಕೋದು ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಚುನಾವಣೆ ಗೆಲ್ಲಲು 150 ಕೋಟಿ ಖರ್ಚು ಮಾಡುತ್ತಿದೆಯಾ ಜೆಡಿಎಸ್?

ನಮ್ಮೂರಲ್ಲಿ ಮುಕ್ಕಾಲು ಭಾಗ ಸುಮಲತಾರಿಗೆ ಮತ ಹಾಕುತ್ತಾರೆ. ಉಪೇಂದ್ರ ಕೂಡ ನಮ್ಮೂರಿಗೆ ಬಂದಿದ್ದರು. ಆಗ ಅವರು ಕೂಡ ಮತ ಹಾಕುವಂತೆ ಕೇಳಿಕೊಂಡಿದ್ದರು. ಆದ್ರೆ ನಾವೆಲ್ಲ ಸುಮಲತಾರಿಗೆ ವೋಟು ಹಾಕೋದು ಎಂದು ಗಡ್ಡಪ್ಪ ಹೇಳಿದರು.

'ಆಯ್ತು ಬುಡು ಎಂದು ಹೇಳುತ್ತಾ ತಮ್ಮ ವಿಶಿಷ್ಟ ಡೈಲಾಗ್ ನಿಂದಲೇ ಚಿತ್ರಪ್ರೇಮಿಗಳನ್ನು ಗೆದ್ದಿದ್ದ ತಿಥಿ ಚಿತ್ರದ ಗಡ್ಡಪ್ಪ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!