ನೆಹರೂ, ಇಂದಿರಾ ಬೈದು ಅವರನ್ನೇ ಅನುಸರಿಸುವ ಮೋದಿ: ರಾಜ್ ಕಿಡಿ!

By Web DeskFirst Published Apr 13, 2019, 3:05 PM IST
Highlights

'ನೆಹರೂ, ಇಂದಿರಾ ಗಾಂಧಿ ಅವರನ್ನೇ ಅನುಸರಿಸುವ ಪ್ರಧಾನಿ ಮೋದಿ'|'ನೆಹರೂ-ಇಂದಿರಾ ಅವರನ್ನು ತೆಗಳುವ ಮೋದಿ ಅವರನ್ನೇ ಕಾಪಿ ಮಾಡ್ತಾರೆ'| ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆರೋಪ| 'ನೆಹರೂ ತಮ್ಮನ್ನು ಪ್ರಥಮ್ ಸೇವಕ್ ಎಂದು ಕರೆದುಕೊಂಡಿದ್ದರು'| 'ಮೋದಿ ತಮ್ಮನ್ನು ಪ್ರಧಾನ್ ಸೇವಕ್ ಎಂದು ಕರೆದುಕೊಂಡಿದ್ದಾರೆ'| ಭಗತ್ ಸಿಂಗ್ ಅವರನ್ನು ಎರಡು ಬಾರಿ ಜೈಲಿನಲ್ಲಿ ಭೇಟಿಯಾಗಿದ್ದ ನೆಹರೂ|

ನವದೆಹಲಿ(ಏ.13): ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ, ಇಂದಿರಾ ಗಾಂಧಿ ಅವರನ್ನು ಸಾರ್ವಜನಿಕವಾಗಿ ತೆಗಳುವ ಪ್ರಧಾನಿ ಮೋದಿ, ವಾಸ್ತವದಲ್ಲಿ ಅವರನ್ನೇ ಅನುಸಸರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹರಿಹಾಯ್ದಿದ್ದಾರೆ.

ತಮ್ಮನ್ನು ದೇಶದ ಪ್ರಥಮ ಪ್ರಧಾನಮಂತ್ರಿ ಎಂದು ಕರೆಯವುದನ್ನು ಇಷ್ಟಪಡದ ನೆಹರೂ, ತಮ್ಮನ್ನು ದೇಶದ ಪ್ರಥಮ ಸೇವಕ ಎಂದು ಕರೆಯುವಂತೆ ಹೇಳಿದ್ದರು. ಅದನ್ನೇ ಕಾಪಿ ಮಾಡಿರುವ ಮೋದಿ, ತಮ್ಮನ್ನು ಪ್ರಧಾನ್ ಸೇವಕ್ ಎಂದು ಕರೆದುಕೊಳ್ಳುತ್ತಾರೆ ಎಂದು ರಾಜ್ ಠಾಕ್ರೆ ಲೇವಡಿ ಮಾಡಿದ್ದಾರೆ.

ನವದೆಹಲಿಯ ತೀನ್ ಮೂರ್ತಿ ಭವನದ ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯದಲ್ಲಿ ಪಂಡಿತ್ ನೆಹರು ಅವರ ಈ ಹೇಳಿಕೆ ಕೆತ್ತಲ್ಪಟ್ಟಿದೆ. ಮೋದಿ ಜನರ ಮುಂದೆ ಇನ್ನೆಷ್ಟು ನಾಟಕವಾಡುತ್ತಾರೆ ನೋಡೋಣ ಎಂದು ಠಾಕ್ರೆ ಹೇಳಿದ್ದಾರೆ.

ಮೋದಿ-ಶಾ ಜೊಡಿ ದೇಶಕ್ಕೆ ಅಪಾಯಕಾರಿ ಎಂದ ರಾಜ್ ಠಾಕ್ರೆ, ಸುಳ್ಳುಗಳ ಸರದಾರನಾದ ಪ್ರಧಾನಿ ಮೋದಿಯನ್ನು ಈ ಬಾರಿ ಮನೆಗೆ ಕಳುಹಿಸುವಂತೆ ಜನರಲ್ಲಿ ಮನವಿ ಮಾಡಿದರು.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!