ಮೀನುಗಾರಿಕೆ ಹಾಗೂ ಪಶೋಸಂಗೋಪನೆ ಸಚಿವ ವೆಂಕಟರಾವ್ ನಾಡಗೌಡ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳ, (ಏ.2): ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದ್ರೆ ಮೂತ್ರಕ್ಕೂ ಜಿಎಸ್ಟಿ ಹಾಕ್ತಾರೆ ಎಂದು ಸಚಿವ ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದ್ದಾರೆ.
ಇಂದು (ಮಂಗಳವಾರ) ಕೊಪ್ಪಳದಲ್ಲಿ ಮಾತನಾಡಿದ ನಾಡಗೌಡ, 'ಮೋದಿ ಪ್ರತಿಯೊಂದಕ್ಕೂ ಜಿಎಸ್ಟಿ ಹಾಕಿ ದೇಶದ ಅರ್ಥ ವ್ಯವಸ್ಥೆಗೆ ಪೆಟ್ಡು ನೀಡಿದ್ದಾರೆ. ಮತ್ತೊಮ್ಮೆ ಅವರು ಪ್ರಧಾನಿಯಾದ್ರೆ ಮೂತ್ರಕ್ಕೂ GST ಹಾಕುತ್ತಾರೆ' ಎಂದು ವಾಗ್ದಾಳಿ ನಡೆಸಿದರು.
ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ವೆಂಕಟರಾವ್ ನಾಡಗೌಡ
ಸರ್ವಾಧಿಕಾರಿ ಮೋದಿಯಿಂದ ದೇಶ ಉದ್ದಾರವಾಗಲ್ಲ. ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ನೋಟ್ ಬ್ಯಾನ್ ಮಾಡಿ ಬ್ಲ್ಯಾಕ್ ಮನಿ ವರ್ಗಾವಣೆಗೆ ಅನುಕೂಲ ಕಲ್ಪಿಸಿದರು ಎಂದು ಮೋದಿ ವಿರುದ್ಧ ಕಿಡಿಕಾರಿದರು.
ಕಳೆದ 5 ವರ್ಷ ಆಡಳಿತದಲ್ಲಿ ರೈತರ ಪರವಾಗಿ ಒಂದೇ ಒಂದು ಯೋಜನೆ ತರಲಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದ ಬಳಿಕ ವರ್ಷಕ್ಕೆ 6 ಸಾವಿರ ಅಂದರೇ ತಿಂಗಳಿಗೆ 500 ಕೊಡ್ತಾರಂತೆ. ಈ ಮೂಲಕ ಮೋದಿ ರೈತರನ್ನು ಭಿಕ್ಷಕುರನ್ನಾಗಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.