
ನವದೆಹಲಿ(ಏ.02): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಕ್ಯಾಪ್ಟನ್ ಶಾಲಿನಿ ಸಿಂಗ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಆಪ್ ರಾಷ್ಟ್ರೀಯ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಕ್ಯಾ. ಶಾಲಿನಿ ಸಿಂಗ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಶಾಲಿನಿ ಸಿಂಗ್, 'ಸ್ವಹಿತಕ್ಕಿಂತ ದೇಶದ ಹಿತ ಮೊದಲು ಎಂದು ಬಯಸುವ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಾನು, ದೆಹಲಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಮ್ ಆದ್ಮಿ ಸರ್ಕಾರದ ಕಾರ್ಯವೈಖರಿಯನ್ನು ಕಂಡು ಪಕ್ಷಕ್ಕೆ ಸೇರ್ಪಡಯಾಗಿರುವೆ' ಎಂದು ಹೇಳಿದರು.
ಶಾಲಿನಿ ಸಿಂಗ್ ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದಲ್ಲದೇ, ಮಿಸೆಸ್ ಇಂಡಿಯಾ ಆಗಿಯೂ ಖ್ಯಾತಿ ಗಳಿಸಿದ್ದರು.