ಸುಮಲತಾ ಪರ ಮೋದಿ ಬ್ಯಾಟಿಂಗ್ ನಂತರ ಹುಟ್ಟಿಕೊಂಡ ಪ್ರಶ್ನೆಗಳು

By Web DeskFirst Published Apr 9, 2019, 10:29 PM IST
Highlights

ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪ್ರಧಾನಿ ಭಾಷಣ ಮಾಡಿ ತೆರಳಿದ್ದಾರೆ. ಮೈಸೂರಿನ ಭಾಷಣದ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಹಾಗಾದರೆ ಮೋದಿ ಸುಮಲತಾ ಹೆಸರು ಹೇಳಲು ಏನು ಕಾರಣ?

ಮೈಸೂರು[ಏ. 09] ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಸಮಾವೇಶಲ್ಲಿ ಭಾಷಣ ಮಾಡುತ್ತ ರೆಬಲ್ ಸ್ಟಾರ್ ಅಂಬರೀಶ್ ಮತ್ತು ಮಂಡ್ಯ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಹಾಗಾದರೆ ಇದು ಯಾವ ಸೂಚನೆ ನೀಡುತ್ತಿದೆ?

ಬಿಜೆಪಿಯ ಈ ನಡೆ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ವಿಶೇಷವಾಗಿ ಮಂಡ್ಯ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಚರ್ಚೆ ಆರಂಭವಾಗಿದೆ.

ಚಿತ್ರದುರ್ಗದಲ್ಲಿ ಮೋದಿ ಭಾಷಣದ ಅಸಲಿ ಹೂರಣ, ವಿಶ್ಲೇಷಣೆ

ಇಷ್ಟು ದಿನ ಯಾವುದೆ ಬಿಜೆಪಿ ನಾಯಕರು ಸುಮಲತಾ ಪರವಾಗಿ  ಪ್ರಚಾರ ಮಾಡಿರಲಿಲ್ಲ. ಮಾತಿಗೆ ಎಂಬಂತೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು. ಬಿಜೆಪಿ ಮಂಡ್ಯದಲ್ಲಿ ಕ್ಯಾಂಡಿಡೆಟ್ ಹಾಕಿರಲಿಲ್ಲ.

ಸುಮಲತಾ ಅಂಬರೀಶ್ ಕಾಂಗ್ರೆಸ್ ಮುಖಂಡರ ಮನೆಗೆ ಎಡತಾಕಿದ್ದರು. ಆದರೆ ಈಗ ಮೋದಿ ಮಾತನಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಪಸಂಖ್ಯಾತರ ಮತಗಳು ಸುಮಲತಾ ಅವರಿಂದ ದೂರ ಆಗ್ತವಾ? ಅಥವಾ  ಜೆಡಿಎಸ್ ವಿರೋಧಿ ಮತಗಳು ಕೇಂದ್ರೀಕರಣವಾಗ್ತವಾ? ಎಂಬ ವಿಚಾರಗಳು ಮುನ್ನೆಲೆಗೆ ಬಂದಿವೆ.

click me!