ಉಡುಪಿ: ಬೇರೆ ಪಾರ್ಟಿ ಅಭ್ಯರ್ಥಿ ಕರಪತ್ರದಲ್ಲಿ ಮೋದಿ ಫೋಟೋ, BJP ದೂರು

By Web Desk  |  First Published Apr 9, 2019, 8:59 PM IST

ಬೇರೆ  ಪಾರ್ಟಿ ಅಭ್ಯರ್ಥಿ ತಮ್ಮ ಎಲೆಕ್ಷನ್ ಪ್ರಚಾರದ ಕರಪತ್ರದಲ್ಲಿ ಮೋದಿ ಫೋಟೋ ಬಳಸಿದ್ದು, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಅರೇ ಇದೇನಿದು ಬೇರೆ ಪಕ್ಷದ ಪ್ರಚಾರದಲ್ಲಿ ಮೋದಿ ಫೋಟೋ ಎಂದು ಯೋಚಿಸುತ್ತಿದ್ದೀರಾ? ಕೆಳಗಿದೆ ನೋಡಿ ಇದರ ಕಂಪ್ಲೀಟ್ ಮಾಹಿತಿ.


ಉಡುಪಿ, [ಏ.09]: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಶಿವಸೇನೆಯ ಅಭ್ಯರ್ಥಿಯ ಮತಪ್ರಚಾರ ಕರಪತ್ರದಲ್ಲಿ ಪ್ರಧಾನಿ ನರೇಂದ್ರಿ ಮೋದಿ ಅವರ ಭಾವಚಿತ್ರ ಮುದ್ರಿಸಿರುವುದುವಿವಾದಕ್ಕೆ ಕಾರಣವಾಗಿದೆ.

 ಶಿವಸೇನೆಯಿಂದ ಸ್ಪರ್ಧಿಸುತ್ತಿರುವ ಗೌತಮ್ ಪ್ರಭು ಎಂಬವರು ತಮ್ಮ ಕರಪತ್ರದಲ್ಲಿ ಮತ್ತು ಪ್ರಚಾರ ವಾಹನದ ಮೇಲೆ ಬಿಜೆಪಿಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರು ಭಾವಚಿತ್ರವನ್ನು ಮುದ್ರಿಸಿ ಮತಯಾಚನೆ ನಡೆಸುತ್ತಿದ್ದಾರೆ.

Tap to resize

Latest Videos

ಉಡುಪಿ ಈ ಮಾಜಿ ಯೋಧನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಒಂದು ಹವ್ಯಾಸ!

 ಈ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನಮ್ಮ ರಾಜ್ಯದಲ್ಲಿ ಶಿವಸೇನೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ, ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ಶಿವಸೇನೆ ಸ್ಪರ್ಧಿಸುತ್ತಿರುವುದರಿಂದ ಮೋದಿಯ ಚಿತ್ರವನ್ನು ಶಿವಸೇನೆ ಬಳಸುವಂತಿಲ್ಲ ಎಂದು ಬಿಜೆಪಿ ದೂರಿನಲ್ಲಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಅವರು ಶಿವಸೇನೆಯ ಅಭ್ಯರ್ಥಿಗೆ ನೊಟೀಸ್ ನೀಡಿದ್ದು, ಮೋದಿಯ ಚಿತ್ರವನ್ನು ಬಳಸದಂತೆ ಆದೇಶಿಸಿದ್ದಾರೆ. 

‘ಇಂದಿರಾ ಕ್ಷೇತ್ರ’ದಲ್ಲಿ ಶೋಭಾ, ಪ್ರಮೋದ್‌: ಹಸ್ತ‘ಕ್ಷೇಪ’ವಾದರೆ BJPಗೆ ವರ, JDSಗೆ ಶಾಪ

ಆದರೆ ಶಿವಸೇನೆಯ ನಾಯಕರು ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಅಲ್ಲಿ ಶಿವಸೇನೆಯ ಮತ ಪ್ರಚಾರದಲ್ಲಿ ಮೋದಿ ಅವರ ಭಾವಚಿತ್ರವನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿಯೂ ಮೋದಿಯ ಚಿತ್ರವನ್ನು ಬಳಸುತ್ತಿದ್ದೇವೆ ಎಂದು ಸಮರ್ಥನೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯೊಂದಿಗೆ ಲೋಕಸಭಾ ಅಖಾಡಕ್ಕಿಳಿದಿವೆ. ಆದ್ರೆ ಕರ್ನಾಟಕದಲ್ಲಿ ಯಾವುದೇ ಮೈತ್ರಿ ಇಲ್ಲ. 

click me!