ಮಂಡ್ಯ ಲೋಕಸಭಾ ಕಣ ಕಾವೇರುತ್ತಿದೆ, ಮತ್ತೊಂದೆಡೆ ಆರೋಪ-ಪ್ರತ್ಯಾರೋಪ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಸಿನಿಮೀಯ ಬೆಳವಣಿಗೆಗಳು ನಡೆಯುತ್ತಿವೆ.
ಮಂಡ್ಯ, [ಮಾ.31]: ಸಚಿವ ಎಚ್.ಡಿ.ರೇವಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ವೈಯಕ್ತಿಕ ಟೀಕೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಹಾಲಿ ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ನಾಲಿಗೆ ಹರಿಬಿಟ್ಟಿದ್ದಾರೆ.
ಕುಮಾರಸ್ವಾಮಿ ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ ಶರೀರ ತಂದಾಗ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ ನೋಡಿ ಇವತ್ತು ಚುನಾವಣೆಗೆ ಬಂದಿದ್ದೀರಾ ಎಂದು ಸುಮಲತಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಸುಮಲತಾಗೆ ಅವಮಾನ: ರೇವಣ್ಣ ಪರ ಕ್ಷಮೆ ಕೋರಿದ ಕುಮಾರಸ್ವಾಮಿ, ನಿಖಿಲ್!
ನಾಗಮಂಗಲದ ಮಲ್ಲೇನಹಳ್ಳಿಯಲ್ಲಿ ಇಂದು [ಭಾನುವಾರ] ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ, ನಾಯ್ಡು ಜನಾಂಗದವರು ಮಂಡ್ಯ ಜಿಲ್ಲೆಯನ್ನ ಮರಳು ಮಾಡ್ತಿದ್ದಾರೆ. ತೀರ್ಮಾನ ಆಗಿ ಬಿಡ್ಲಿ ಅವರು ಗೌಡ್ರ, ಒಕ್ಕಲಿಗರ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಅಂಬರೀಶ್ ಮದ್ವೆ ಆದ ಮೇಲೆ ಸುಮಲತಾರನ್ನು ಗೌಡರೇ ಎಂದು ತಿಳಿದುಕೊಳ್ಳೋಣ. ಆದ್ರೆ ಅಂಬರೀಶ್‌ಗೆ ಮತ ಹಾಕಿದವರಿಗೆ ಒಂದು ದಿನ ಸಹಾಯ ಮಾಡಿದ್ದಾರಾ.? ಮಂಡ್ಯಕ್ಕೆ ಬಂದು ಮತಹಾಕಿದ್ದಾರಾ..? ಎಂದು ವಾಗ್ದಾಳಿ ನಡೆಸಿದರು.
ಅಯ್ಯೋ ಪಾಪ ರೇವಣ್ಣ: ಹಾಡಿನ ಮೂಲಕವೇ ನೀರಿಳಿಸಿದೆ ಸುವರ್ಣ!
ಸುಮಲತಾ ಮಂಡ್ಯ ಗೌಡ್ತಿ ಅಲ್ಲ ಎಂದು ಈ ಹಿಂದೆ ವಿವಾದ ಸೃಷ್ಟಿಸಿದ್ದ ಕೆ.ಟಿ. ಶ್ರೀಕಂಠೇಗೌಡ ಸಮ್ಮುಖದಲ್ಲಿಯೇ ಶಿವರಾಮೇಗೌಡ್ರು ಸುಮಲತಾ ವಿರುದ್ಧ ವೈಯಕ್ತಿಕ ವಿಚಾರಗಳನ್ನೇ ಬಳಸಿಕೊಂಡು ಕಿಡಿಕಾರಿದರು.
ಗಂಡ ಸತ್ತು ಆರು ತಿಂಗಳಿಗೆ ಚುನಾವಣೆ ಬೇಕಾ? ಎಂದು ಹೇಳಿ ರೇವಣ್ಣ ಸಾಕಷ್ಟು ಟೀಕೆಗಳಿಗೆ ಸುರಿಯಾಗಿದ್ದರು. ಇನ್ನು ಕೆ.ಟಿ. ಶ್ರೀಕಂಠೇಗೌಡ್ರು ಸುಮಲತಾರನ್ನ ಮಂಡ್ಯ ಗೌಡ್ತಿ ಅಲ್ಲ ಎಂದು ಈ ಹಿಂದೆ ವಿವಾದ ಸೃಷ್ಟಿಸಿಕೊಂಡಿದ್ದರು.
ನಾಲಿಗೆ ಹರಿಬಿಟ್ಟದ್ದು ರೇವಣ್ಣ, ಕ್ಷಮೆ ಕೇಳಿದ್ದು ಪಕ್ಷ!
ಇದೀಗ ಇವರ ಸಾಲಿಗೆ ಶಿವರಾಮೇಗೌಡರ ಸೇರಿಕೊಂಡಿದ್ದು, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.