ವೋಟಿಂಗ್‌ಗೆ ಬಾರದ ರಶ್ಮಿಕಾ ಮಂದಣ್ಣ, ಕಾರಣ ಏನಂತಣ್ಣ!

By Web DeskFirst Published Apr 18, 2019, 5:22 PM IST
Highlights

ಮಾಜಿ ಸಂಸದೆ ರಮ್ಯಾ ವೋಟಿಂಗ್ ಗೆ ಆಗಮಿಸದಿರುವುದು ದೊಡ್ಡ ಸುದ್ದಿಯಾಗುತ್ತಿತ್ತು.  ಆದರೆ ಈ ಬಾರಿ ಮತ್ತೊಬ್ಬ ನಟಿ ಸಹ ತಮ್ಮ ಹಕ್ಕನ್ನು ಚಲಾವಣೆ ಮಾಡಿಲ್ಲ.

ಕೊಡಗು(ಏ. 17)  ಮತದಾನಕ್ಕೆ ಬಹುಭಾಷೆ ನಟಿ ರಶ್ಮಿಕಾ ಮಂದಣ್ಣ ಚಕ್ಕರ್ ಹಾಕಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಮತದಾನದ ಹಕ್ಕು ಹೊಂದಿರೋ ರಶ್ಮಿಕಾ ಲೋಕಸಭಾ ಚುನಾವಣೆಗೆ ಮತ ಹಾಕಲು ಬಂದಿಲ್ಲ.

ಪಂಜರಪೇಟೆಯ ಮತಗಟ್ಟೆ ಸಂಖ್ಯೆ 157ರಲ್ಲಿ ಮತ ಚಲಾಯಿಸಬೇಕಿದ್ದ ನಟಿ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ.#

ಈ ಬಾರಿಯಾದ್ರೂ ಮಾಜಿ ಸಂಸದೆ ಮತ ಹಾಕ್ತಾರಾ... ಎಲ್ಲಿದೆ ವೋಟಿಂಗ್?

ಹೈದರಬಾದ್ ನಲ್ಲಿ ತೆಲುಗು ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಮಾಹಿತಿ ಸಿಕ್ಕಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕನ್ನಡದಿಂದ ತೆಲಗು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

click me!