ಹೆಗಡೆಗಿಂತ ಪತ್ನಿಯೇ ಶ್ರೀಮಂತೆ

Published : Apr 03, 2019, 10:07 AM IST
ಹೆಗಡೆಗಿಂತ ಪತ್ನಿಯೇ ಶ್ರೀಮಂತೆ

ಸಾರಾಂಶ

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ವೇಳೆ ಅಭ್ಯರ್ಥಿಗಳು ತಮ್ಮ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡುತ್ತಿದ್ದಾರೆ. ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆ ಅವರಿಗಿಂತ ಅವರ ಪತ್ನಿಯೇ ಶ್ರೀಮಂತೆ ಎನ್ನುವ ಮಾಹಿತಿ ಹೊರ ಬಿದ್ದಿದೆ. 

ಕಾರವಾರ :  ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಸ್ತಿ ಕಳೆದ 5 ವರ್ಷದಲ್ಲಿ 5.24 ಕೋಟಿಯಷ್ಟು ಹೆಚ್ಚಾಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಅವರ ಒಟ್ಟು ಆಸ್ತಿ 3.20 ಕೋಟಿ ಇತ್ತು. ಈ ಬಾರಿ ಅವರು ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 8.45 ಕೋಟಿ ಆಸ್ತಿ ತೋರಿಸಿದ್ದಾರೆ. ಅನಂತಕುಮಾರ್‌ ಬಳಿ 35,36,136 ಮೌಲ್ಯದ ಚರಾಸ್ತಿ, 3,47,42,805 ಮೌಲ್ಯದ ಸ್ಥಿರಾಸ್ತಿ, ಪತ್ನಿ ಶ್ರೀರೂಪಾ ಬಳಿ 3,81,01,661 ಮೌಲ್ಯದ ಚರಾಸ್ತಿ, 1,81,50,000 ಮೌಲ್ಯದ ಸ್ಥಿರಾಸ್ತಿ ಇದೆ. 

9.61 ಲಕ್ಷ ಹಾಗೂ 5.50 ಲಕ್ಷ ಮೌಲ್ಯದ ಎರಡು ಕಾರು ಹೊಂದಿದ್ದು, 1.27 ಕೋಟಿ ಸಾಲ, ಪತ್ನಿ ಹೆಸರಲ್ಲಿ 2.82 ಕೋಟಿ ಸಾಲವಿದೆ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

4 ಕೇಸ್‌: ಅನಂತ ಕುಮಾರ್‌ ಹೆಗಡೆ ಮೇಲೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ 4 ಪ್ರಕರಣ ದಾಖಲಾಗಿದ್ದು, ಎಲ್ಲಾ ಪ್ರಕರಣ ವಿಚಾರಣೆ ಹಂತದಲ್ಲಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಹೊನ್ನಾವರದಲ್ಲಿ ಎರಡು ಗುಂಪುಗಳ ನಡುವೆ ಅಶಾಂತಿಗೆ ಯತ್ನ ಹಾಗೂ ಶಿರಸಿಯಲ್ಲಿ ವೈದ್ಯರ ಮೇಲೆ ಹಲ್ಲೆ ಕುರಿತು ಪ್ರಕರಣವಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!