
ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟ ಪ್ರಕಾಶ್ ರಾಜ್ ಅವರಿಗೆ ಎಸ್‌ಯುಸಿಐ (ಸಿ) ಪಕ್ಷವು ಬೆಂಬಲ ಸೂಚಿಸಿದೆ.
ಎಸ್‌ಯುಸಿಐ (ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ) ಪಕ್ಷದ ಪಾಲಿಟ್‌ಬ್ಯೂರೊ ಸದಸ್ಯರಾದ ಕೆ.ರಾಧಾಕೃಷ್ಣ ಮತ್ತು ರಾಜ್ಯ ಕಾರ್ಯದರ್ಶಿ ಕೆ.ಉಮಾ ಅವರು ಪ್ರಕಾಶ್ ರಾಜ್ ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಪಕ್ಷದ ಬೆಂಬಲ ಪ್ರಕಟಿಸಿದರು.
;
ಈ ವೇಳೆ ಮಾತನಾಡಿದ ರಾಧಾಕೃಷ್ಣ ಅವರು, ಪ್ರಕಾಶ್ ರಾಜ್ ಅವರ ಸ್ಥಿರವಾದ ಬಿಜೆಪಿ ವಿರೋಧಿ, ಕಾಂಗ್ರೆಸ್ ವಿರೋಧಿ ಹಾಗೂ ಅವರ ಜನಪರ ಧೋರಣೆ ಮೆಚ್ಚುವಂಥದ್ದು. ನಮ್ಮ ಪಕ್ಷವು ಪ್ರಕಾಶ್ ರಾಜ್ ಅವರ ಗೆಲುವಿಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್ ಅವರು ಎಸ್‌ಯುಸಿಐ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.