ನಮೂನೆ ಬಂತು, ಪಕ್ಷೇತರ ಸರಣಿ ಸುಮಲತಾರ ನಡುವೆ ‘ಅಂಬಿ’ ಸುಮಲತಾ ನಂಬರ್!

Published : Mar 29, 2019, 11:42 PM ISTUpdated : Mar 29, 2019, 11:52 PM IST
ನಮೂನೆ ಬಂತು, ಪಕ್ಷೇತರ ಸರಣಿ ಸುಮಲತಾರ ನಡುವೆ ‘ಅಂಬಿ’ ಸುಮಲತಾ ನಂಬರ್!

ಸಾರಾಂಶ

ಈ ಹೊಸ ಆಟ ಮಂಡ್ಯ ರಣ ಕಣದಲ್ಲಿನ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆಯೇ? ಉತ್ತರ ಸದ್ಯಕ್ಕೆ ಗ ಒತ್ತಿಲ್ಲ. ಆದರೆ ಮಂಡ್ಯ ಕಣದಲ್ಲಿ ಎಲ್ಲೆಲ್ಲೂ ಸುಮಲತಾ ಹೆಸರಿನದ್ದೆ ಸದ್ದು.

ಮಂಡ್ಯ [ಮಾ. 29]  ದಳಪತಿಗಳ ಪ್ಲಾನ್ ಸಕ್ಸಸ್ ಆಗಲಿದೆಯೇ?  ಹೀಗೊಂದು ಪ್ರಶ್ನೆಗೆ ಪೂರಕ ಉತ್ತರ ಈಗ ಸಿಕ್ಕಿದೆ.

ಸುಮಲತಾ ಹೆಸರಿನ ಮೂಲಕವೇ ಮತದಾರರಲ್ಲಿ ಗೊಂದಲ ಮೂಡಿಸುವ ಪ್ಲ್ಯಾನ್ ಗುಟ್ಟಾಗಿ ಏನೂ ಉಳಿದಿರಲಿಲ್ಲ. ಈಗ ಮತಪತ್ರದ ನಮೂನೆ ಸಿಕ್ಕಿದ್ದು ಸುಮಲತಾ ಅಂಬರೀಶ್ ಹೆಸರಿನ ಮೇಲೆ ಮತ್ತು ಕೆಳಗೆ ಸುಮಲತಾನೇ ಇದ್ದಾರೆ.

ಮತ್ತೆ ಮಂಡ್ಯ ಅಖಾಡಕ್ಕಿಳಿಯಲು ಸಜ್ಜಾದ 'ಜೋಡೆತ್ತು'...!

ಮಂಡ್ಯ ಕಣದಲ್ಲಿ  ಒಟ್ಟು 22 ಜನ ಅಭ್ಯರ್ಥಿಗಳಿದ್ದಾರೆ. ಮೊದಲನೇ ಕ್ರಮ ಸಂಖ್ಯೆ ನಿಖಿಲ್ ಅವರದ್ದು ಆಗಿದ್ದರೆ 20 ನೇ ಕ್ರಮ ಸಂಖ್ಯೆ ಸುಮಲತಾ ಅಂಬರೀಶ್ ಅವರದ್ದು. ಆದರೆ ಸುಮಲತಾ ಅಂಬರೀಶ್‌ ಗೆ ಮೊದಲು ಅಂದರೆ 19 ಕ್ರಮ ಸಂಖ್ಯೆಯಲ್ಲಿ ಸುಮಲತಾ ಎಂಬುವರ ಹೆಸರೇ ಇದ್ದರೆ  ಸುಮಲತಾ ಕ್ರಮ‌ಸಂಖ್ಯೆ ನಂತರ ಅಂದರೆ 21 ನೇ ಕ್ರಮ ಸಂಖ್ಯೆಯಲ್ಲಿ ಎಂ.ಸುಮಲತಾ ಹೆಸರಿದೆ. ಇನ್ನು 22 ನೇ ಕ್ರಮ ಸಂಖ್ಯೆಯಲ್ಲಿ ಸುಮಲತಾ.ಪಿ ಹೆಸರಿದೆ.  19 ನೇ ಕ್ರಮ ಸಂಖ್ಯೆಯಿಂದ 22 ನೇ ಕ್ರಮಸಂಖ್ಯೆವರೆಗೆ ಕ್ರಮವಾಗಿ ನಾಲ್ಕು ಜನ ಸುಮಲತಾರ ಹೆಸರು ಇದ್ದು ಚುನಾವಣೆ ಫಲಿತಾಂಶದ ಮೇಲೆ ಇದು ಪರಿಣಾಮ ಬೀರಲಿಯೇ ಕಾದು ನೋಡಬೇಕು. 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

 

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!