ಕುಮಾರಸ್ವಾಮಿ ಹೇಳಿದ ಸಿನಿಮಾ ಹೀರೋ-ವಿಲನ್ ಕತೆ!

Published : Mar 20, 2019, 07:50 PM ISTUpdated : Mar 20, 2019, 07:52 PM IST
ಕುಮಾರಸ್ವಾಮಿ ಹೇಳಿದ ಸಿನಿಮಾ ಹೀರೋ-ವಿಲನ್ ಕತೆ!

ಸಾರಾಂಶ

ಸಿಎಂ ಕುಮಾರಸ್ವಾಮಿ ಯು ಟರ್ನ್ ಹೊಡೆದಿದ್ದಾರೆ. ಸಿನಿಮಾ ನಟರು ಬಂದು ಪ್ರಚಾರ ಮಾಡುವ ಬಗ್ಗೆ ಮಾತನಾಡಿದ್ದ ಸಿಎಂ ತಮ್ಮ ಮಾತಿನ ವರಸೆ ಬದಲಾಯಿಸಿದ್ದಾರೆ.

ಮಂಡ್ಯ[ಮಾ. 20] JDS ಅಭ್ಯರ್ಥಿಯಾಗಿ ನಾಳೆ ನಿಖಿಲ್ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಮಂಡ್ಯ ಜೆಡಿಎಸ್ ಜಿಲ್ಲಾ ಮುಖಂಡರ ಜೊತೆ ನಿಖಿಲ್ ನಾಮಪತ್ರ ಸಲ್ಲಿಸಲಿದ್ದು ಮಾರ್ಚ್ 25ರಂದು ನಿಖಿಲ್ ಅಧಿಕೃತವಾಗಿ ಉಮೇದುವಾರಿಗೆ ನೀಡಲಿದ್ದಾರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ನಾನು, ಸಚಿವರು, ಶಾಸಕರು ಇರುತ್ತೇವೆ. ಮಾ.25ರಂದು ಮಂಡ್ಯದಲ್ಲಿ ಎಷ್ಟು ಜನ ಸೇರ್ತಾರೆ ಅಂತಾ ನೀವು ನೋಡಿ. ಇವತ್ತಿನ ಜನಸಂಖ್ಯೆಕ್ಕಿಂತ 10 ಪಟ್ಟು ಜನ ಸೇರಿ ಕಾರ್ಯಕ್ರಮ ಮಾಡಿದ್ದೇನೆ ಎಂದು ಸುಮಲತಾ ನಾಂಪತ್ರ ಸಲ್ಲಿಕೆಗೆ ಜನ ಸೇರಿದ್ದರ ಬಗ್ಗೆಯೂ ಮಾತನಾಡಿದರು.

‘ಅಧಿಕಾರದ ಬೆಣ್ಣೆ ಮೆದ್ದ ಕೃಷ್ಣಾ ಅವರೇ ಗೌಡರ ಸಹಾಯ ಮರೆತುಹೋಯಿತೆ?’

ಕನ್ನಡ ಚಲನಚಿತ್ರ ಸ್ಟಾರ್ ನಟರ ಬಗ್ಗೆ ನಾನು ಯಾವತ್ತು ಮಾತನಾಡಿಲ್ಲ. ಯಾರ್ ಬೇಕಾದ್ರೂ ಯಾರ ಪರವಾಗಿ ಚುನಾವಣಾ ಪ್ರಚಾರ ಮಾಡಬಹುದು. ಹೀರೋ ಆದ್ರೂ ಮಾಡಬಹುದು, ವಿಲನ್ ಆದ್ರೂ ಮಾಡಬಹುದು. ಸುಮಲತಾ ನಾಮಪತ್ರ ಸಲ್ಲಿಕೆಯಿಂದ ನನಗೆ ಯಾವುದೆ  ಟೆನ್ ಶನ್ ಇಲ್ಲ ಎಂದು ಮೇಲುಕೋಟೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದರು.

 

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!