‘ಈಗಲೇ ಹೇಳ್ತೀನಿ‌ ಬರೆದಿಟ್ಟುಕೊಳ್ಳಿ ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ’

Published : Mar 20, 2019, 06:08 PM IST
‘ಈಗಲೇ ಹೇಳ್ತೀನಿ‌ ಬರೆದಿಟ್ಟುಕೊಳ್ಳಿ ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ’

ಸಾರಾಂಶ

ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿ ಆಗಲ್ಲ ಎಂದು ಭವಿಷ್ಯ ಹೇಳಿದ್ದಾರೆ.

ಹಾಸನ[ಮಾ. 20]  ದೇಶದಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬರಲ್ಲ. ಈಗಲೇ ಹೇಳ್ತೀನಿ‌ ಬರೆದಿಟ್ಟುಕೊಳ್ಳಿ ಮೋದಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂದು ಹಾಸನದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ‌ ಭವಿಷ್ಯ ನುಡಿದಿದ್ದಾರೆ.

ಕಳೆದು ಐದು ವರ್ಷದಲ್ಲಿ ರಾಜ್ಯಕ್ಕೆ ಬಿಜೆಪಿಯ ಕೊಡುಗೆ ಏನು? ಎಂದು ವಾಗ್ದಾಳಿ ನಡೆಸಿದ  ಬಿಜೆಪಿ ವಿರುದ್ದ ರೇವಣ್ಣ‌ ಪುತ್ರನ ಪರವಾಗಿ ಪ್ರಚಾರ ಮಾಡುತ್ತ ವಾಗ್ದಾಳಿ ನಡೆಸಿದರು. ರೈತರ ಖಾತೆಗೆ ಹಣ ಹಾಕ್ತೀವಿ ಅಂದಿದ್ದರು.  ಆದರೆ ಬಂದಿದ್ದು ಕೇವಲ 6 ಜನಕ್ಕೆ. ರಾಜ್ಯಕ್ಕೆ ಸಿಗಬೇಕಾದ ಅನುದಾನ ಸಿಗುತ್ತಿಲ್ಲ  ಎಂದು ಕೇಂದ್ರ ಸರಕಾರದ ಮೇಲೆ ಆರೋಪಿಸಿದರು.

ಗೌಡರು ಆಶೀರ್ವಾದ ಮಾಡಿಕೊಂಡಿದ್ದರೆ ಒಳ್ಳೆದು, ಒಂದು ಕಾಲದ ಆಪ್ತನ ಸಲಹೆ

ಬಿಜೆಪಿಗೆ ಇರೋದು ಕೇವಲ ಸುಳ್ಳಿನ ಅಪ ಪ್ರಚಾರ. ಅದು ಬಿಟ್ರೆ ಅವರಿಗೆ ಬೇರೆ ಏನೂ ಇಲ್ಲಾ ಎಂದು ಆಕ್ರೋಶ. ಬಿಜೆಪಿಯವರಿಗೆ ನಾಚಿಗೆ ಆಗಬೇಕು. ಯಾವ ಮುಖ ಇಟ್ಕೊಂಡು ಇವರು ಮತ ಕೇಳ್ತಾರೆ ಎಂದು ಪ್ರಶ್ನೆ ಮಾಡಿದರು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!