‘ಡಿಕೆಶಿ ಆಟ ನಡೆಯಲ್ಲ : ಏಳೆಂಟು ಸ್ಥಾನವೂ ಬರಲ್ಲ’

By Kannadaprabha NewsFirst Published Apr 18, 2019, 8:52 AM IST
Highlights

ಲೋಕಸಭಾ ಚುನಾವಣೆ ಸಮರ ಆರಂಭವಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಹಾಗು ಬಿಜೆಪಿ ಹೆಚ್ಚಿನ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿವೆ. 

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಡಿ.ಕೆ.ಶಿವಕುಮಾರ್‌ ಆಟ ನಡೆಯಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. 

ಬಾದಾಮಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ದೇಶದ ಚುನಾವಣೆ. ನರೇಂದ್ರ ಮೋದಿಯವರ ಚುನಾವಣೆ. ಇದು ಯಾವುದೋ ಜಾತಿ, ಪಕ್ಷದ ಚುನಾವಣೆಯಲ್ಲ. ಮೋದಿಯವರ ಮುಂದೆ ಯಾರೂ ನಿಲ್ಲಕ್ಕಾಗುವುದಿಲ್ಲ. 

ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಯಾರ ಪ್ರಭಾವವೂ ನಡೆಯುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದರು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಮಾಡಿಕೊಂಡರು ಸಹ ರಾಜ್ಯದಲ್ಲಿ ಏಳೆಂಟು ಸ್ಥಾನಗಳು ಬರುವುದಿಲ್ಲ. 

ಸಿದ್ದರಾಮಯ್ಯ ಅವರ ಪರಸ್ಥಿತಿ ಗಮನಿಸಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೂ ಬೇಡವಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಸದ್ಯ ನಡೆದಿರುವ ಬೆಳವಣಿಗೆ ಹಾಗೂ ಚರ್ಚೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಈಗಾಗಲೇ ಲಿಂಗಾಯತ ಧರ್ಮ ಹೋರಾಟ ಮಾಡಿದವರು ಯಾರು ಇದ್ದಾರೋ ಅವರೆಲ್ಲರೂ ಮೂಲೆಗುಂಪಾಗಿದ್ದಾರೆ. ಯಾವ ರಾಜಕಾರಣಿಯೂ ಧರ್ಮದ ತಂಟೆಗೆ ಹೋಗಬಾರದು ಎಂದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!