
ದಾವಣಗೆರೆ: ಸಿ.ಟಿ.ರವಿ ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂಬ ಸಚಿವೆ ಜಯಮಾಲಾ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಸಿ.ಟಿ.ರವಿ, ಜಯಮಾಲಾ ಮೊದಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಂಸ್ಕಾರ ಕಲಿಸಲಿ ಎಂದು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಂಡ ಮನೆಗೆ ದ್ರೋಹ ಬಗೆದವರನ್ನು ಏನಂತಾರೆ ಎಂಬುದಾಗಿ ನಾನು ಪ್ರಶ್ನಿಸಿದ್ದಕ್ಕೆ ಮಂಡ್ಯದ ಜನರೇ ಉತ್ತರಿಸಿದ್ದ ಪದ ಅದಾಗಿತ್ತೇ ಹೊರತು, ನನ್ನಿಂದ ಬಂದ ಮಾತು ಅದಾಗಿರಲಿಲ್ಲ. ತಾಯಿ ಸಂಸ್ಕಾರ, ಸಾರ್ವಜನಿಕ ಸಭ್ಯತೆ ಅಂತಹದ್ದನ್ನೆಲ್ಲಾ ನನಗೆ ಕಲಿಸಿಕೊಟ್ಟಿಲ್ಲ.
ಹೆಣ್ಣು ಮಕ್ಕಳು, ತಾಯಂದಿರ ಬಗ್ಗೆ ಅಪಾರ ಗೌರವ ಹೊಂದಿರುವವನು ನಾನು ಎಂದು ಅವರು ಸಚಿವೆ ಜಯಮಾಲ ಟೀಕೆಗೆ ಪ್ರತಿಕ್ರಿಯಿಸಿದರು. ಮಹಿಳೆಯರ ಬಗ್ಗೆ ಸಚಿವೆ ಜಯಮಾಲಾರಿಗೆ ಅಷ್ಟೊಂದು ಕಾಳಜಿ ಇದ್ದರೆ ರೈತ ಮಹಿಳೆಗೆ ಇಷ್ಟುದಿನ ಎಲ್ಲಿ ಮಲಗಿದ್ದೆ ಎಂದು ಕೇಳಿದ, ಸುಮಲತಾ ಅಂಬರೀಶ್ಗೆ ಇನ್ನಿಲ್ಲದ ಕಾಟ ಕೊಟ್ಟಸಿಎಂ ಕುಮಾರಸ್ವಾಮಿಗೆ ಸಂಸ್ಕಾರ ಕಲಿಸಲಿ ಎಂದು ಸಲಹೆ ನೀಡಿದ್ದಾರೆ.