ಜೆಡಿಎಸ್ ಗೆ 8 ರಲ್ಲಿ 4 ಒಕೆ, ಇನ್ನಾಲ್ಕು ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು ಯಾಕೆ?

By Web DeskFirst Published Mar 13, 2019, 9:21 PM IST
Highlights

ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಅಂತಿಮವಾಗಿದ್ದು 20 ಕ್ಷೇತ್ರಗಳನ್ನು ದೊಡ್ಡ ಪಕ್ಷ ಕಾಂಗ್ರೆಸ್ ಹಾಗೂ 8 ಕ್ಷೇತ್ರಗಳು ಜೆಡಿಎಸ್ ಗೆ ಸಿಕ್ಕಿದ್ದು ಲೋಕ ಸಮರದಲ್ಲಿ ಸ್ಪರ್ಧೆ ಮಾಡಲಿವೆ.

ಬೆಂಗಳೂರು[ಮಾ. 13]  ದೋಸ್ತಿಗಳಲ್ಲಿ ಹಂಚಿಕೆಯಾದ ಕ್ಷೇತ್ರಗಳ ಪೈಕಿ ಜೆಡಿಎಸ್ ಗೆ  ಬೆಂಗಳೂರು ಉತ್ತರ, ಮಂಡ್ಯ,  ಹಾಸನ,  ಶಿವಮೊಗ್ಗ, ಉತ್ತರ ಕನ್ನಡ,  ವಿಜಯಪುರ, ತುಮಕೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳು ದೊರೆತಿವೆ.

ಹಾಗಾದರೆ ಯಾವ ಆಧಾರದಲ್ಲಿ ಕೈ ಪಡೆ ಜೆಡಿಎಸ್ ಗೆ ಈ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿತು. ದೋಸ್ತಿಯಲ್ಲಿ ಚರ್ಚೆಯಾದ ಸೂತ್ರಗಳು ಯಾವವು? ಇಲ್ಲಿದೆ ಉತ್ತರ

ಕೈಗೆ ಮೈಸೂರು ಪಾಕ್, ಚುನಾವಣೆಗೂ ಮುನ್ನವೇ ಜಿದ್ದಿನಲ್ಲಿ ಗೆದ್ದ ಸಿದ್ದರಾಮಯ್ಯ

ಬೆಂಗಳೂರು ಉತ್ತರ, ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಲ್ಲಿ ಸಹಜವಾಗಿ ಜೆಡಿಎಸ್ ಪ್ರಬಲವಾಗಿದೆ.  ಆದರೆ ಇನ್ನುಳಿದ ಕಡೆಗಳ ಕೆಲ ಜಿಲ್ಲೆಗಳಲ್ಲಿ ಜೆಡಿಎಸ್ ಎಂಎಲ್ ಎಗಳೇ ಇಲ್ಲ. ಆದರೂ ಕ್ಷೇತ್ರವನ್ನು ಜೆಎಡಿಎಸ್ ಪಾಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಸಾಂಪ್ರದಾಯಿಕವಾಗಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎದುರಾಳಿಗಳು. ಕಾರ್ಯಕರ್ತರಲ್ಲಿ ಅಸಮಾಧಾನವಿದ್ದರೂ ಕ್ಷೇತ್ರ ಪ್ರತಿನಿಧಿಸುತ್ತಿರುವ ಅನಂತ್ ಕುಮಾರ್ ಹೆಗಡೆ ಸ್ಪರ್ಧೆ ಮಾಡುವುದು ನಿಶ್ಚಿತ. ಕಾಂಗ್ರೆಸ್ ನಿಂದ ಆದರೆ ಬಿ.ಕೆ.ಹರಿಪ್ರಸಾದ್, ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವ, ಭೀಮಣ್ಣ ನಾಯ್ಕ್ ಹೆಸರುಗಳು ಕೇಳಿ ಬಂದಿದ್ದವು. ಜೆಡಿಎಸ್ ನಿಜಕ್ಕೂ ಇಲ್ಲಿ ಅಭ್ಯರ್ಥಿ ಹುಡುಕಬೇಕಾಗಿದ್ದು ಬಿಜೆಪಿಯಲ್ಲಿದ್ದುಕೊಂಡು ಸಚಿವರಾಗಿ ಈಗ ಜೆಡಿಎಸ್ ನಲ್ಲಿರುವ ಆನಂದ್ ಅಸ್ನೋಟಿಕರ್ ಹೆಸರು ಕೇಳಿ ಬರುತ್ತಿದೆ.

ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಜೆಡಿಎಸ್ ನಿಂದ ಸ್ಪರ್ಧೆ ಮಾಡುವುದು ಖಚಿತ. 6 ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ದೋಸ್ತಿಗಳು ಒಟ್ಟಾಗಿ ಕೆಲಸ ಮಾಡಿದ್ದವು. ವಿಜಯಪುರ ಮತ್ತು ಉಡುಪಿ-ಚಿಕ್ಕಮಗಳೂರಿನಲ್ಲೂ ಜೆಡಿಎಸ್ ಮೂಲ ಕಾರ್ಯಕರ್ತರಿಗೆ ಹುಡುಕಾಟ ಮಾಡಬೇಕಾಗಿದೆ.  ಅಂಕಿ-ಸಂಖ್ಯೆಗಳ ಆಧಾರದಲ್ಲಿ ಜೆಡಿಎಸ್ ಗೆ ಇಷ್ಟು ಸ್ಥಾನ ಸಿಗಬೇಕಿತ್ತು ಎಂಬ ಆಧಾರದಲ್ಲಿ ಬಿಟ್ಟುಕೊಡಲಾಗಿದೆ ಎಂಬ ಮಾತು ಕೇಳಿಬಂದಿದೆ.

click me!