ದೋಸ್ತಿ ಸೀಟು ಹಂಚಿಕೆ ಫೈನಲ್: ಕಾಂಗ್ರೆಸ್ ಗೆ 20, JDSಗೆ 8 ಸ್ಥಾನ..!

By Web DeskFirst Published Mar 13, 2019, 8:24 PM IST
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ  ಡ್ಯಾನಿಷ್ ಸಭೆ ಫಲಪ್ರದವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸೀಟು ಹಂಚಿಕೆ ಫೈನಲ್ ಆಗಿದೆ. ಹಾಗಾದ್ರೆ ಜೆಡಿಎಸ್ ಗೆ ಎಷ್ಟು? ಕಾಂಗ್ರೆಸ್ ಎಷ್ಟು? ಮತ್ತು ಯಾರಿಗೆ ಯಾವ ಕ್ಷೇತ್ರ..?

ಬೆಂಗಳೂರು, ಮಾ. 13]: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಕಗ್ಗಂಟಾಗಿದ್ದ ಸೀಟು ಹಂಚಿಕೆ ಬಗೆಹರಿದಿದ್ದು, ಸೀಟು ಹಂಚಿಕೆ ಪಟ್ಟಿ ಫೈನಲ್ ಆಗಿದೆ.

ಕೇರಳದ ಕೊಚ್ಚಿನ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ  ಡ್ಯಾನಿಷ್ ಚರ್ಚೆ ಫಲಪ್ರದವಾಗಿದೆ.

ಸಭೆಯಲ್ಲಿ ಜೆಡಿಎಸ್ ಗೆ ಒಟ್ಟು 8 ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಸಮ್ಮತಿಸಿದೆ. ಇನ್ನು ಕಾಂಗ್ರೆಸ್ ಪಾಲಿಗೆ 20 ಕ್ಷೇತ್ರಗಳು ಸಿಕ್ಕಿವೆ. ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಡೆದುಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದೆ.

INC COMMUNIQUE

Announcement of seat sharing for Karnataka Lok Sabha seats. pic.twitter.com/FvRW7tht8x

— INC Sandesh (@INCSandesh)

ಲೋಕಸಭಾ ಎಲೆಕ್ಷನ್:ಹೈಕಮಾಂಡ್ ಅಂಗಳದಲ್ಲಿ ರಾಜ್ಯ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಗೆ ನೆಲೆ ಜತೆಗೆ ಅಭ್ಯರ್ಥಿಯೇ ಇಲ್ಲ. ಆದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್ ತೆಗೆದುಕೊಂಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಲ್ಲಿರುವ ಮಾಜಿ ಸಂಸದ ಜಯಪ್ರಕಾಶ್ ಹೆಗಡೆ ಅವರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಜೆಡಿಎಸ್ ಒಳಗೊಳಗೆ ಕಸರತ್ತು ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ತೆಗೆದುಕೊಂಡಿದೆ ಎಂದು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಜೆಡಿಎಸ್ ಗೆ ಯಾವ-ಯವ ಕ್ಷೇತ್ರಗಳು..?
1. ಬೆಂಗಳೂರು ಉತ್ತರ 
2. ಮಂಡ್ಯ 
3. ಹಾಸನ
4. ಶಿವಮೊಗ್ಗ
5. ಉತ್ತರ ಕನ್ನಡ,
6. ವಿಜಯಪುರ
7. ತುಮಕೂರು 
8. ಉಡುಪಿ-ಚಿಕ್ಕಮಗಳೂರು 

ಕಾಂಗ್ರೆಸ್ ಪಾಲಿನ ಕ್ಷೇತ್ರಗಳು
1. ಬೆಂಗಳೂರು ಗ್ರಾಮಾಂತರ
2. ಚಿಕ್ಕಬಳ್ಳಾಪುರ
3. ಚಿತ್ರದುರ್ಗ
4. ಚಾಮರಾಜನಗರ 
5. ಕಲಬುರಗಿ
6. ರಾಯಚೂರು
7.ಬೆಂಗಳೂರು ಕೇಂದ್ರ
8. ಬೆಂಗಳೂರು ದಕ್ಷಿಣ ಕ್ಷೇತ್ರ
9. ಮೈಸೂರು-ಕೊಡಗು
10. ಧಾರವಾಡ 
11. ಹಾವೇರಿ
12. ಬೆಳಗಾವಿ
13. ದಕ್ಷಿಣ ಕನ್ನಡ
14. ಬಾಗಲಕೋಟೆ 
15. ಕೊಪ್ಪಳ
16. ಬಳ್ಳಾರಿ
17. ಚಿಕ್ಕೋಡಿ
18. ಕೋಲಾರ
19.ದಾವಣಗೆರೆ
20.ಬೀದರ್

click me!