ಲೋಕಸಭಾ ಚುನಾವಣಗೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಪ್ರಚಾರ ಹವಾ ಕೂಡ ಜೋರಾಗಿದೆ. ಇತ್ತ ದೇವೇಗೌಡರ ಕ್ಷೇತ್ರದ ಬಿಜೆಪಿ ರೋಡ್ ಶೋ ದಲ್ಲಿ ಜೆಡಿಎಸ್ ಬಾವುಟಗಳು ರಾರಾಜಿಸಿವೆ.
ತುಮಕೂರು : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ನಾಯಕರ ಪ್ರಚಾರವೂ ಭರ್ಜರಿಯಾಗಿ ಸಾಗಿದೆ.
ತುಮಕೂರಿನಲ್ಲಿ ಬಿಜೆಪಿ ಪ್ರಚಾರದ ವೇಳೆ ಜೆಡಿಎಸ್ ಬಾವುಟ ಹಿಡಿದ ಕಾರ್ಯಕರ್ತರು ದೇವೇಗೌಡರ ಪರ ಘೋಷಣೆ ಕೂಗಿದ್ದಾರೆ. ಗೌಡರ ಗೌಡ ದೇವೇಗೌಡ ಎಂದು ಕೂಗಿದ್ದಾರೆ.
ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಬಿಜೆಪಿ ಮುಖಂಡ ಆರ್ ಅಶೋಕ್ ಹಾಗೂ ಶಾಸಕ ಸುರೇಶ್ ಗೌಡ ರೋಡ್ ಶೋ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಜೆಡಿಎಸ್ ಕಾರ್ಯಕರ್ತರ ಕೂಗಿಗೆ ಪ್ರತಿಯಾಗಿ ಬಿಜೆಪಿಗರು ಘೋಷಣೆ ಕೂಗಿದ್ದು, ಮೋದಿ ಮೋದಿ ಎಂದಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿ ಖ್ಯಾತೆ ತೆಗೆದಿದ್ದಾರೆ ಎಂದು ಆರೋಪಿಸಿದ್ದು, ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಈ ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.