
ನವದೆಹಲಿ[ಏ.13]: ದೇಶಾದ್ಯಂತ ಚುನಾವಣೆ ವೇಳೆ ಮತದಾರರ ಕೈಬೆರಳಿಗೆ ಗುರುತು ಹಾಕಲು ಬಳಸುವ ಇಂಕ್‌ನ್ನು ಒಮ್ಮೆ ಹಚ್ಚಿದರೆ ತಿಂಗಳುಗಟ್ಟಲೆ ಅಳಿಸಿಹೋಗದು. ಮೈಸೂರಿನಲ್ಲಿ ತಯಾರಾಗುವ ಇಂಕಿನ ಹಿರಿಮೆಯದು.
ಆದರೆ ಗುರುವಾರ ನಡೆದ ಮತದಾನದ ಬಳಿಕ ಹಲವರು, ತಮ್ಮ ಕೈಗೆ ಹಚ್ಚಿದ್ದ ಇಂಕ್ ಅನ್ನು ಅಳಿಸಬಹುದು ಎಂದು ತೋರಿಸಿದ್ದಾರೆ.
ಕೈಬೆರಳಿನ ಉಗುರಿನ ಬಣ್ಣ ತೆಗೆಯಲು ಬಳಸುವ ರಾಸಾಯನಿಕ ಹಚ್ಚಿದಾಕ್ಷಣ, ಬೆರಳಿಗೆ ಹಚ್ಚಿದ ಇಂಕ್ ಅಳಿಸಿಹೋಗಿದೆ ಎಂದು ಹಲವು ಮತದಾರರು ಟ್ವೀಟರ್‌ನಲ್ಲಿ ಫೋಟೋ ಸಮೇತ ಮಾಹಿತಿ ನೀಡಿದ್ದಾರೆ.