ಮಂಡ್ಯ ಲೋಕಸಭಾ ಕಣಕ್ಕೆ ಸಾಮಾನ್ಯ ವೀಕ್ಷಕರಾಗಿ ಅಣ್ಣಾಮಲೈ ನೇಮಕ..!

By Web DeskFirst Published Apr 7, 2019, 9:45 PM IST
Highlights

ಚುನಾವಣೆ ಸಾಮಾನ್ಯ ವೀಕ್ಷಕರಾಗಿ ಪಿ.ಅಣ್ಣಾಮಲೈ ನೇಮಕ | ಮಂಡ್ಯ ಲೋಕಸಭಾ ಕ್ಷೇತ್ರದ ಮೇಲುಕೋಟೆ, ನಾಗಮಂಗಲ, ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ನೇಮಕ| ಅಣ್ಣಾಮಲೈ ನೇಮಿಸಿ ಚುನಾವಣಾ ಆಯೋಗ ಆದೇಶ|  ಮಂಡ್ಯ ಚುನಾವಣಾಧಿಕಾರಿ ಮಂಜುಶ್ರೀ ಮೇಲೆ ಕೆಲ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಣ್ಣಾಮಲೈ ನೇಮಕ

ಮಂಡ್ಯ, [ಏ.07]: ರಾಷ್ಟ್ರದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇತ್ತಿದ್ದು, ದಿನಕ್ಕೊಂದು ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. 

ಆರೋಪ-ಪ್ರತ್ಯಾರೋಪ,  ಏಟು-ಎದಿರೇಟು, ಪರಸ್ಪರ ವಾಗ್ದಾಳಿ ಹಾಗೂ ದೂರು-ಪ್ರತಿದೂರಿನ ಅಬ್ಬರ ಜೋರಾಗಿದೆ. ಇದರ ನಡುವೆ ಮಂಡ್ಯ ಚುನಾವಣೆಯ ಸಾಮಾನ್ಯ ವೀಕ್ಷಕರಾಗಿ ಐಎಎಸ್​ ಅಧಿಕಾರಿ ಪಿ.ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಭಾನುವಾರ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮಂಡ್ಯ ಬ್ಯಾಲೆಟ್: DC ವಿರುದ್ಧ ಗೋಲ್‌ಮಾಲ್ ಆರೋಪ?

ಮಂಡ್ಯ ಚುನಾವಣಾಧಿಕಾರಿ ಮಂಜುಶ್ರೀ ಮೇಲೆ ಕೆಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲುಕೋಟೆ, ನಾಗಮಂಗಲ, ಕೆ.ಆರ್.ಪೇಟೆ ಮತ್ತು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

 ಬೆಂಗಳೂರು ಸೌತ್ ಡಿಸಿಪಿಯಾಗಿರುವ ಅಣ್ಣಾಮಲೈ ಖಡಕ್ ಅಧಿಕಾರಿ ಎಂದೇ ಫೇಮಸ್. ಈ ಹಿನ್ನಲೆಯಲ್ಲಿ ತೀವ್ರ ರಣರಂಗವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ವೀಕ್ಷಕರನ್ನಾಗಿ ನಿಯೋಜಿರುವುದು ಭಾರೀ ಕುತೂಹಲ ಮೂಡಿಸಿದೆ.

click me!