ಸಮಯ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯಮೂಲ್ಯ. ಒಮ್ಮೊಮ್ಮೆ ಸಮಯ ಉಳಿಸಲು ಹೋಗುವ ವಿಚಾರ ಅಚ್ಚರಿಗೂ ಕಾರಣವಾಗಬಹುದು. ಅಂಥ ಒಂದು ಉದಾಹರಣೆ ಇಲ್ಲಿದೆ.
ಕುಮಟಾ[ಏ. 07] ಕಾರೊಂದು ದೂರದಲ್ಲಿ ಬರುತ್ತಿತ್ತು. ಚುನಾವಣೆ ಸಮಯವಾದ್ದರಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು ಕಾರನ್ನು ತಪಾಸಣೆಗೆ ಒಳಪಡಿಸಲು ನಿಲ್ಲಿಸಿದರು. ಆದರೆ ಚಾಲಕನ ಜಾಗದಲ್ಲಿ ಕಿರೀಟ ಧರಿಸಿದ್ದ ದೇವತೆಯೊಬ್ಬಳಿದ್ದಳು! ಈಗ ಬೆಚ್ಚಿ ಬೀಳುವ ಸರದಿ ಪೋಲಿಸರದ್ದು.
ಆದದ್ದು ಇಷ್ಟೆ,, ಯಕ್ಷಗಾನ ಕಲಾವಿದರು ತುಂಬಾ ಬ್ಯುಸಿ ಶೆಡ್ಯೂಲ್ ನಲ್ಲಿಯೇ ಇರುತ್ತಾರೆ. ಯಕ್ಷ ರಂಗದ ಹೆಣ್ಣು ವೇಷದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಲಾವಿದ ನಿಲ್ಕೋಡು ಶಂಕರ ಹೆಗಡೆ ಕಾರು ಚಾಲನೆ ಮಾಡುತ್ತಿದ್ದರು. ಸಮಯ ಉಳಿಸುವ ಸಲುವಾಗಿ ಬಣ್ಣದ ವೇಷವನ್ನು ಕಳಚದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳುತ್ತಿದ್ದರು.
undefined
ರಂಗಸ್ಥಳದಲ್ಲೇ ಕುಸಿದು ಮೃತಪಟ್ಟ ಯಕ್ಷಗಾನ ಕಲಾವಿದ
ಶನಿವಾರ ರಾತ್ರಿ ನಡೆದ ಅಚ್ಚರಿಯನ್ನು ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ನಂತರ ಚುನಾವಣಾಧಿಕಾರಿಳು ಸಹ ಹೆಗಡೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರಂತೆ..
"ಅಯ್ಯೋ ದೇವರೇ! ಇದೇನಪ್ಪ ಹೊಸ ಅವತಾರ ಅಂತ ಅಂದುಕೊಳ್ತಿದ್ದಿರಾ?, ಹಾಗೇನಿಲ್ಲ ಕಣ್ರೀ,. ನಿನ್ನೆ ರಾತ್ರಿ ನಾನು ಗುಡೆಯಂಗಡಿ ಮಾದರಿ ಉತ್ಸವವನ್ನು ಮುಗಿಸಿ ಇನ್ನೊಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. Already late ಆಗಿದ್ದರಿಂದ Make up ಅಲ್ಲೆ ಕಾರ್ ಡ್ರೈವ್ ಮಾಡಿಕೊಂಡು ಹೊರಟೆ. ಆಗ ನನ್ನ ಹೆಂಡತಿ ಕ್ಲಿಕ್ಕಿಸಿದ ಫೋಟೋ. ನನ್ನನ್ನು ಈ ಅವತಾರದಲ್ಲಿ ನೋಡಿದ ಅವಳ ಕಣ್ಣಲ್ಲಿ ಮಿಂಚು. ಚಿಕ್ಕ ಮಕ್ಕಳಿಗೆ ಐಸ್ ಕ್ರೀಮ್ ಕಂಡಾಗ ಆಗುವ ಆನಂದ ಅವಳ ಮುಖದಲ್ಲಿ. ಅಷ್ಟೇ ಅಲ್ಲ, ಚೆಕ್ ಪೋಸ್ಟ್ ಬಳಿ ನನ್ನ ಕಾರ್ ಚೆಕ್ ಮಾಡಲು ಬಂದ ಚುನಾವಣಾಧಿಕಾರಿಗಳ ಹಾಗೂ ಪೋಲಿಸರ ಮುಖದಲ್ಲಿ ಆಶ್ಚರ್ಯ ಹಾಗೂ ಆನಂದ. ಎಲ್ಲರೂ ನನ್ನ ಫೋಟೋ ತೆಗೆದಿದ್ದೇ ತೆಗೆದಿದ್ದು. ಒಂದು ಫೋಟೋದ ಹಿಂದೆ ಎಷ್ಟೊಂದು ನೆನಪುಗಳಿರೊತ್ತೆ ಅಲ್ವಾ?...