ಮಾ.14ರಂದು ಮತ್ತೊಂದು ಲೋಕಸಭಾ ಕ್ಷೇತ್ರಕ್ಕೆ JDS ಅಭ್ಯರ್ಥಿ ಹೆಸ್ರು ಘೋಷಣೆ

Published : Mar 13, 2019, 06:21 PM ISTUpdated : Mar 13, 2019, 06:26 PM IST
ಮಾ.14ರಂದು ಮತ್ತೊಂದು ಲೋಕಸಭಾ ಕ್ಷೇತ್ರಕ್ಕೆ JDS ಅಭ್ಯರ್ಥಿ ಹೆಸ್ರು ಘೋಷಣೆ

ಸಾರಾಂಶ

ನಾಳೆ [ಗುರುವಾರ] ಅಧಿಕೃತವಾಗಿ ಮಂಡ್ಯಲೋಕಸಭಾ ಅಭ್ಯರ್ಥಿ ಹೆಸರು  ಘೋಷಣೆ | ಹಿನ್ನೆಲೆಯಲ್ಲಿ ಮಂಡ್ಯಕ್ಕೆ ತೆರಳಲಿರುವ ಸಿಎಂ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡ |

ಮಂಡ್ಯ, [ಮಾ.13]: ಇಂದು [ಬುಧವಾರ] ಜೆಡಿಎಸ್ ನ ಒಂದು ಲೋಕಸಭಾ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಾಗಿದೆ. ಹಾಸನ ಲೋಕಸಭಾ ಕ್ಷೇತ್ರ ಮೈತ್ರಿ ಪ್ರಜ್ವಲ್ ರೇವಣ್ಣ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಘೋಷಣೆ ಮಾಡಿದರು. 

ಇದರ ಬೆನ್ನಲ್ಲೇ ನಾಳೆ  ಅಂದ್ರೆ ಗುರುವಾರ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಲಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ.

ಮಂಡ್ಯ: ನಿಖಿಲ್ ರಾಜಕೀಯ ಭವಿಷ್ಯ ಬಿಚ್ಚಿಟ್ಟ ಗುಪ್ತಚರ ಇಲಾಖೆ ವರದಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾಳೆ ಹನ್ನೊಂದು ಗಂಟೆಗೆ ದೇವೇಗೌಡರು ಅಧಿಕೃತವಾಗಿ ನಿಖಿಲ್ ಅಭ್ಯರ್ಥಿ ಎಂದು  ಘೋಷಣೆ ಮಾಡ್ತಾರೆ ಎಂದು ಹೇಳಿದರು.‌

ಮದ್ದೂರಿನಿಂದ ಬೈಕ್ ರ್ಯಾಲಿ ಮೂಲಕ ಮಂಡ್ಯಕ್ಕೆ ಅದ್ದೂರಿ ಸ್ವಾಗತದಲ್ಲಿ ಕರೆ ತರಲಾಗುತ್ತೆ. ಬಳಿಕ ಸಮಾವೇಶದಲ್ಲಿ ಮಂಡ್ಯ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿದ್ದಾರೆ ಎಂದರು.

ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಹಾಗು ಜೆಡಿಎಸ್ ಮೆತ್ರಿ ಅಭ್ಯರ್ಥಿ ಎಂದು ಈಗಾಗಲೇ ಗೊತ್ತಾಗಿದೆ. ಅದನ್ನು ದೇವೇಗೌಡ ಅವರು ಅಧಿಕೃತಗೊಲಿಸಲಿದ್ದಾರೆ ಅಷ್ಟೇ.

ನಿಖಿಲ್ ವಿರುದ್ಧ ಪ್ರಬಲ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಕಣದಲ್ಲಿದ್ದು, ಇವರಿಬ್ಬರ ನಡುವೆ ನೆಕ್ ಟು ನೆಕ್ ಫೈಟ್ ಗೆ ಮಂಡ್ಯ ಸಾಕ್ಷಿಯಾಗಲಿದೆ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!