ಮೋದಿ ವಿರುದ್ಧ ಸ್ಪರ್ಧಿಸಿದ್ದ ಇಬ್ಬರೂ ಕನ್ನಡಿಗರ ನಾಮಪತ್ರ ತಿರಸ್ಕೃತ!

By Web DeskFirst Published May 2, 2019, 3:28 PM IST
Highlights

ಮೋದಿ ವಿರುದ್ಧ ಸ್ಪರ್ಧಿಸಿದ್ದ ಕನ್ನಡಿಗ ಪತ್ರಕರ್ತನ ನಾಮಪತ್ರ ತಿರಸ್ಕೃತ| ವಾರಾಣಸಿಯಲ್ಲಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯುಪಿ ಶಿವಾನಂದ| ಶಿವಾನಂದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ| ಶಿವಾನಂದ ಸಲ್ಲಿಸಿದ್ದ ನಾಮಪತ್ರದಲ್ಲಿ ದೋಷ ಎಂದ ಚುನಾವಣಾ ಆಯೋಗ| ಮೋದಿ ವಿರುದ್ಧ ಸರ್ಪರ್ಧಿಸಿದ್ದ ಮತ್ತೋರ್ವ ಕನ್ನಡಿಗನ ನಾಮಪತ್ರವೂ ತಿರಸ್ಕೃತ| ಬೆಂಗಳೂರಿನ ಸುಹೈಲ್ ಸೇಠ್ ನಾಮಪತ್ರ ಕೂಡ ತಿರಸ್ಕೃತ|

ವಾರಾಣಸಿ(ಮೇ.02): ಮಹತ್ವದ ಬೆಳವಣಿಗೆಯೊಂದರಲ್ಲಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇಬ್ಬೂ ಕನ್ನಡಿಗರ ನಾಮಪತ್ರ ತಿರಸ್ಕೃತಗೊಂಡಿವೆ.

ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಯುಪಿ ಶಿವಾನಂದ ಪ್ರಧಾನಿ ಮೋದಿ ವಿರದ್ಧ ವಾರಾಣಸಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಆದರೆ ಶಿವಾನಂದ ಸಲ್ಲಿಸಿದ್ದ ನಾಮಪತ್ರದಲ್ಲಿ ದೋಷ ಕಂಡುಬಂದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಿಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಇನ್ನು ಮೋದಿ ವಿರುದ್ಧ ಸ್ಪರ್ಧಿಸಿದ್ದ ಮತ್ತೋರ್ವ ಕನ್ನಡಿಗ ಬೆಂಗಳೂರಿನ ಸುಹೈಲ್ ಸೇಠ್ ನಾಮಪತ್ರ ಕೂಡ ತಿರಸ್ಕೃತಗೊಂಡಿದೆ. ಅದರಂತೆ ತೆಲಂಗಾಣ ಮೂಲದ ಹಲವು ರೈತರ ನಾಮಪತ್ರಗಳೂ ಕೂಡ ತಿರಸ್ಕೃತಗೊಂಡಿವೆ. ದಾಖಲೆಗಳು ಸರಿಯಿಲ್ಲದ ಕಾರಣ ಈ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!