
ಅಮರಾವತಿ : ದೇಶದಲ್ಲಿ ಲೋಕಸಭಾ ಚುನಾವಣೆ ಪರ್ವ ನಡೆಯುತ್ತಿದ್ದು, ಇದೇ ವೇಳೆ ಕೆಲವೆಡೆ ಮರು ಮತದಾನಕ್ಕೆ ಆದೇಶಿಸಲಾಗಿದೆ.
ಈಗಾಗಲೇ ಆಂಧ್ರ ಪ್ರದೇಶದಲ್ಲಿ ಈಗಾಗಲೇ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇಲ್ಲಿನ ಐದು ಬೂತ್ ಗಳಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿ, ಘೋಷಣೆ ಮಾಡಿದೆ.
ಗುಂಟೂರು ಕ್ಷೇತ್ರ, ಓಂಗೋಲೆಯ ಪ್ರಕಾಶಂನಲ್ಲಿ, ನೆಲ್ಲೂರಿನ 5 ಬೂತ್ ಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 11 ರಂದು ಆಂಧ್ರ ಪ್ರದೇಶದಲ್ಲಿ ಮತದಾನ ನಡೆದಿದ್ದು, ಮರು ಮತದಾನಕ್ಕೆ ಮೇ 6 ರಂದು ದಿನಾಂಕ ನಿಗದಿ ಮಾಡಲಾಗಿದೆ.
ಇವಿಎಂನಲ್ಲಿ ದೋಷ ಕಾಣಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಮರು ಮತದಾನ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಈಗಾಗಲೇ ದೇಶದಲ್ಲಿ ನಾಲ್ಕು ಹಂತದ ಚುನಾವಣೆ ಮುಕ್ತಾಯವಾಗಿದ್ದು, ಇನ್ನೂ ಮೂರು ಹಂತದಲ್ಲಿ ಚುನಾವಣೆ ಬಾಕಿ ಇದೆ. ಒಟ್ಟು 7 ಹಂತದಲ್ಲಿ ದೇಶದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಮೇ 19 ರಂದು ಮುಕ್ತಾಯವಾಗಲಿದೆ. ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.