ಪಕ್ಷ ತೊರೆದ ಅಗ್ರ ನಾಯಕರಿಗೆ ಕಲಬುರಗಿಯಲ್ಲಿ ಬಿತ್ತು ಚಪ್ಪಲಿ ಹಾರ!

By Web Desk  |  First Published Apr 18, 2019, 6:09 PM IST

ಮಹಾ ಚುನಾವಣೆಗಳ ಸಂದರ್ಭದಲ್ಲಿ ಪಕ್ಷಾಂತರ ಸರ್ವೇ ಸಾಮಾನ್ಯ. ಆದರೆ ಕಲಬುರಗಿಯಲ್ಲಿ ಪಕ್ಷ ತೊರೆದವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಕಲಬುರಗಿ[ಏ. 18] ಲೋಕ ಸಮರದ ಸಂದರ್ಭ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ  ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬಂಜಾರ ಸಮಾಜದ ನಾಯಕರ ವಿರುದ್ಧ ಆಕ್ರೋಶ ಮುಂದುವರಿದ್ದು ಕಿಡಿಗೇಡಿಗಳು ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದಾರೆ.

ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಬಾಬುರಾವ್ ಚವ್ಹಾಣ ಹಾಗೂ ಇತರ ಮೂವರ ಫ್ಲೆಕ್ಸ್ ಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು ಆಕ್ರೋಶ ಹೊರ ಹಾಕಿದ್ದಾರೆ.ಕಲಬುರಗಿಯ ಭಂಕೂರು ಗ್ರಾಮದಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಹಾಕಲಾಗಿರುವ ಫ್ಲೆಕ್ಸ್ ಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಅಷ್ಟೇ ಅಲ್ಲ, ಸಮಾಜದ ದ್ರೋಹಿಗಳು ಅನ್ನೋ ಎಂದು ಬರೆಯಲಾಗಿದೆ. 

Tap to resize

Latest Videos

'ನಿಖಿಲ್ ಎಲ್ಲಿದ್ದೀಯಪ್ಪಾ' ವೋಟ್ ಹಾಕಿದ ವಿಡಿಯೋ ಫುಲ್ ವೈರಲ್

ಬಂಜಾರ ಸಮಾಜದ ಮುಖಂಡರು ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಪ್ರಚಾರ ಮಾಡುತ್ತಿರೋದಕ್ಕೆ ರೊಚ್ಚಿಗೆದ್ದು ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

click me!