ತೇಜ್ ಬಹಾದ್ದೂರ್ ಭದ್ರತಾ ಸಿಬ್ಬಂದಿಯಿಂದ ಮಾಧ್ಯಮದವರ ಮೇಲೆ ಹಲ್ಲೆ!

Published : May 19, 2019, 04:49 PM IST
ತೇಜ್ ಬಹಾದ್ದೂರ್ ಭದ್ರತಾ ಸಿಬ್ಬಂದಿಯಿಂದ ಮಾಧ್ಯಮದವರ ಮೇಲೆ ಹಲ್ಲೆ!

ಸಾರಾಂಶ

ತೇಜ್ ಬಹಾದ್ದೂರ್ ಭದ್ರತಾ ಸಿಬ್ಬಂದಿಯಿಂದ ಮಾಧ್ಯಮದವರ ಮೇಲೆ ಹಲ್ಲೆ| ವಿಡಿಯೋ ಮಾಡಲು ಹೋಗಿ ತೇಜ್ ಪ್ರತಾಪ್ ಕಾರಿನ ಗಾಜು ಒಡೆದ ಕ್ಯಾಮರಾಮನ್| ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್| ಕ್ಯಾಮರಾಮನ್ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬ್ಬಂದಿ|

ಪಾಟ್ನಾ(ಮೇ.19): ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಖಾಸಗಿ ಭದ್ರತಾ ಸಿಬ್ಬಂದಿ ಕ್ಯಾಮರಾಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಮತದಾನ ಮಾಡಲು ತೇಜ್ ಪ್ರತಾಪ್ ಯಾದವ್ ಮತಗಟ್ಟೆ ಬಳಿ ಬಂದಾಗ ಛಾಯಾಗ್ರಾಹಕರು ವರ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಕ್ಯಾಮರಾಮನ್ ವೋರ್ವ ವಿಡಿಯೋ ಮಾಡಲು ಹೋಗಿ ತೇಜ್ ಪ್ರತಾಪ್ ಕಾರಿನ ಗಾಜನ್ನು ಒಡೆದಿದ್ದಾನೆ.

ಇದರಿಂದ ಕೆರಳಿದ ತೇಜ್ ಪ್ರತಾಪ್ ಭದ್ರತಾ ಸಿಬ್ಬಂದಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ತಮ್ಮ ಭದ್ರತಾ ಸಿಬ್ಬಂದಿಯ ಕೃತ್ಯವನ್ನು ಸಮರ್ಥಿಸಿಕೊಂಡಿರುವ ತೇಜ್ ಪ್ರತಾಪ್, ತಮ್ಮನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!