
ತುಮಕೂರು[ಏ. 10] ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆದಿಯಾಗಿ ನಾಯಕರು ಬುಧವಾರ ಪ್ರಚಾರ ಕೈಗೊಂಡಿದ್ದರೆ ತುಮಕೂರಿನ ಇಬ್ಬರು ನಾಯಕರು ಮಾತ್ರ ಬೆಳಗ್ಗೆಯಿಂದ ಅಂತರ ಕಾಯ್ದುಕೊಂಡಿದ್ದರು.
ಕೆ.ಎನ್.ರಾಜಣ್ಣ ಮತ್ತು ಟಿಕೆಟ್ ವಂಚಿತ ಸಂಸದ ಮುದ್ದಹನುಮೇಗೌಡ ಪ್ರಚಾರ ಕಾರ್ಯದಲ್ಲಿ ಇರಲಿಲ್ಲ. ಮಧುಗಿರಿಯಲ್ಲಿ ನಡೆಯುವ ಪ್ರಚಾರ ಸಭೆಯ ತಯಾರಿಯಲ್ಲಿಯೂ ರಾಜಣ್ಣ ಸಕ್ರಿಯವಾಗಿ ಕಾಣಿಸಿಕೊಂಡಿಲ್ಲ. ಆದರೆ ಸಂಜೆ ವೇಳೆಗೆ ಹಿರಿಯ ನಾಯಕರನ್ನು ಇಬ್ಬರು ಸೇರಿಕೊಂಡಿದ್ದಾರೆ.
'ನಾನು ಗೆದ್ದು ದೆಹಲಿಗೆ ಹೋಗ್ತಿನಾ, ಇಲ್ಲವಾ? ಗೊತ್ತಿಲ್ಲ' ಎಂದ HDD
ತಿಪಟೂರು, ಚಿಕ್ಕನಾಯಕನಹಳ್ಳಿ ಸಭೆಯಲ್ಲಿ ರಾಜಣ್ಣ, ಮುದ್ದಹನುಮೇಗೌಡ ಇರಲಿಲ್ಲ. ದೇವೇಗೌಡರರಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಸಚಿವ ಎಸ್ .ಆರ್.ಶ್ರೀನಿವಾಸ್, ಮಾಜಿ ಸಚಿವ ಟಿ.ಬಿ ಜಯಚಂದ್ರ, ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಹಾಗೂ ಮಾಜಿ ಸಚಿವ ಸಿಎಂ ಇಬ್ರಾಹಿಂ ಸಾಥ್ ನೀಡಿದ್ದರು. ಆದರೆ ಮಧುಗಿರಿ ಸಮಾವೇಶದ ವೇಳೆಗೆ ಇಬ್ಬರು ನಾಯಕರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.