ನನ್ನ ಭಯವೇಕೆ? JDSಗೆ ಸುಮಲತಾ ಪ್ರಶ್ನೆ!

By Web DeskFirst Published Mar 16, 2019, 7:39 PM IST
Highlights

ಮಂಡ್ಯ ಲೋಕಸಭಾ ಕ್ಷೇತ್ರ ರಾಜಕೀಯ ಅಬ್ಬರಕ್ಕೆ ಸಾಕ್ಷಿಯಾಗುತ್ತಿದೆ. ರಣಕಣದಲ್ಲಿ ಮತದಾರರ ವಿಶ್ವಾಸಗಳಿಸಲು ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಕುಮಾರಸ್ವಾಮಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದ ಜೆಡಿಎಸ್ ನಾಯಕರನ್ನು  ಸುಮಲತಾ ಪ್ರಶ್ನಿಸಿದ್ದಾರೆ. 

ಮೈಸೂರು(ಮಾ.16): ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗೋ ಮೊದಲೇ ಮಂಡ್ಯ ರಣಕಣ ರಂಗೇರಿದೆ. ಒಂದೆಡೆ ಸುಮಲತಾ ಅಂಬರೀಷ್ ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ಜೊತೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಹೋರಾಟವೂ ಆರಂಭಗೊಂಡಿದೆ. ಇದೀಗ ಮಂಡ್ಯ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರನ್ನು ಸುಮಲತಾ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ಮಂಡ್ಯ ಲೋಕಸಭಾ: ಮಾದೇಗೌಡ್ರ ಬೆಂಬಲ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ..!

8 ಜನ ಶಾಸಕರು, ಮೂರು ಮಂತ್ರಿಗಳು ಹಾಗೂ ಎಂಎಲ್‌ಸಿ ಇರುವಾಗ, ನನ್ನನ್ನ ಕಂಡರೆ  ಜೆಡಿಎಸ್‌ಗೆ ಭಯ ಯಾಕೆ? ಎಂದು ಸುಮಲತಾ ಪ್ರಶ್ನಿಸಿದ್ದಾರೆ. ಜೆಡಿಎಸ್‌ ನಾಯಕರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಡುತ್ತಿರುವುದು ಯಾಕೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ ಸುಮಲತಾ ಹೇಳಿದ್ದಾರೆ. 

ಇದನ್ನೂ ಓದಿ: ಕೃಷ್ಣ ಸಂಧಾನ : ಸುಮಲತಾ ಬೆನ್ನಿಗೆ ನಿಲ್ಲುತ್ತಾ ಮೋದಿ ಪಡೆ?

ಮಂಡ್ಯ ಕಣದಲ್ಲಿ ವಾಕ್ಸಮರ ತಾರಕಕ್ಕೇರುತ್ತಿದ್ದಂತೆ,  ಸುಮಲತ ಪರವಾಗಿ ಕಾಂಗ್ರೆಸ್ ಮುಖಂಡ ಬ್ಯಾಟ್ ಬೀಸಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಕೆಲಸ ಮಾಡುತ್ತೇನೆ. ಈ ಕಾರಣಕ್ಕೆ ಪಕ್ಷದಿಂದ ಉಚ್ಚಾಟಣೆ ಮಾಡಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದ್ದಾರೆ.

ಜೆಡಿಎಸ್‌ ಸಚಿವ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸುಬ್ರಹ್ಮಣ್ಯ ತಕ್ಕೆ ತಿರುಗೇಟು ನೀಡಿದ್ದಾರೆ. ಸುಮಲತಾ ಎಂಪಿ ಆಗೋಕೆ ಸೂಕ್ತ ಅಭ್ಯರ್ಥಿ. ನಾವು ಒಳ್ಳೆ ಅಭ್ಯರ್ಥಿ ಜೊತೆ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾರ ಭಯವೂ ಇಲ್ಲ. ಮೈತ್ರಿ ಪಕ್ಷಗಳ ಸೂತ್ರಕ್ಕೂ ಡೋಂಟ್ ಕೇರ್ ಎಂದಿದ್ದಾರೆ. 

ಇದನ್ನೂ ಓದಿ: JDSಗೆ ಮಂಡ್ಯ ಸುಲಭವಲ್ಲ, ಒಟ್ಟು ಸಂಖ್ಯೆ 3 ದಾಟಲ್ಲ! ಕಾಂಗ್ರೆಸ್ ನಾಯಕ ಭವಿಷ್ಯ!

ತಾಯಿ ಜೊತೆ ಪ್ರಚಾರ ಕಾರ್ಯದಲ್ಲಿ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಅಭಿಷೇಕ್, ನಿಕಿಲ್ ನನ್ನ ಉತ್ತಮ ಸ್ನೇಹಿತ. ರಾಜಕೀಯದಲ್ಲಿ ಅವರು ಬೇರೆ ಕಡೆ, ನಾವು ಬೇರೆ ಕಡೆ. ಆದರೆ ನಮ್ಮ ಸ್ನೇಹ ಚೆನ್ನಾಗಿದೆ ಮುಂದೇಯೂ ಚೆನ್ನಾಗಿಯೇ ಇರುತ್ತೆ ಎಂದಿದ್ದಾರೆ. ಇದೇ ವೇಳೆ ಸಾ.ರಾ. ಮಹೇಶ್ ಹೇಳಿಕೆಗೆ ಅವರ ಬಳಿಯೇ ಪ್ರತಿಕ್ರಿಯೆ ಕೇಳಿ ಎಂದು ಜಾಣ್ಮೆ ಮೆರೆದಿದ್ದಾರೆ.

click me!