ಮಂಡ್ಯ ಲೋಕಸಭಾ: ಮಾದೇಗೌಡ್ರ ಬೆಂಬಲ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆ..!

By Web DeskFirst Published Mar 16, 2019, 6:20 PM IST
Highlights

ಕಾಂಗ್ರೆಸ್ ಮಾಜಿ ಸಂಸದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜಿ.ಮಾದೇಗೌಡ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಗ್ಗೆ ಮಾದೇಗೌಡ್ರ ಅವರೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ತಮ್ಮ ಬೆಂಬಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. 

ಮಂಡ್ಯ, [ಮಾ.16]: ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರ್ ಜಿಡಿಎಸ್ ಪಕ್ಷದಿಂದ ಮಂಡ್ಯದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಅದೇ ಕ್ಷೇತ್ರದಲ್ಲಿ ನಟ ಅಂಬರೀಶ್ ಪತ್ನಿ ನಟಿ ಸುಮಲತಾ ಕೂಡ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಇದ್ರಿಂದ ಮಂಡ್ಯ ಕಣ ರಂಗೇರಿದೆ.

ಆದ್ರೆ ಜಿಲ್ಲೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವಗೊಂದಲ ಮೈತ್ರಿ ಪಕ್ಷಗಳ ನಾಯಕರಲ್ಲಿದೆ. ಕೆಲ ಕಾಂಗ್ರೆಸ್ ನಾಯಕರು ಮೈತ್ರಿ ಧರ್ಮವನ್ನು ಪಾಲಿಸದೇ ಪಕ್ಷ ಏನೇ ಕ್ರಮಕೈಗೊಂಡರು ಪರವಾಗಿಲ್ಲ ಎಂದು ಸುಮಲತಾ ಅಂಬರೀಶ್ ಗೆ ಜೈ ಎನ್ನುತ್ತಿದ್ದಾರೆ. ಇನ್ನು ಕೆಲವರು ಮೈತ್ರಿ ಧರ್ಮವನ್ನು ಪಾಲಿಸುತ್ತಿದ್ದು, ನಿಖಿಲ್ ಬೆಂಬಲಕ್ಕೆ ನಿಂತಿದ್ದಾರೆ.

ಈಗ ಮಂಡ್ಯದಲ್ಲಿ ಸುಮಲತಾ ಗೋ ಬ್ಯಾಕ್ ಚಳವಳಿ!

ಇನ್ನು ಬಹುಮುಖ್ಯವಾಗಿ ಕಾಂಗ್ರೆಸ್ ಮಾಜಿ ಸಂಸದ ಹಾಗೂ ಮಂಡ್ಯ ಜಿಲ್ಲೆಯ ಹಿರಿಯ ರಾಜಕಾರಣಿ ಜೆ.ಮಾದೇಗೌಡ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲ ಕ್ಷೇತ್ರದಲ್ಲಿ ಇತ್ತು. ಆ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ.

ಮಾದೇಗೌಡ್ರ ಚಿತ್ತ ಯಾರತ್ತ..?
ಮಾಜಿ ಸಂಸದ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಜಿ.ಮಾದೇಗೌಡ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಬೆಂಬಲ ಯಾರಿಗೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

'ಮಂಡ್ಯ: ನಿಖಿಲ್‌ಗೆ ಸುಮಲತಾ ಬೆಂಬಲಿಸುತ್ತಾರೆ...'

'ನಿಖಿಲ್ ಕುಮಾರಸ್ವಾಮಿಯವರಿಗೆ ಆಶಿರ್ವಾದ ಮಾಡಿದ್ದೇನೆ. ಸುಮಲತಾ ಅವರೂ ಬಂದು ಬೆಂಬಲ ಕೇಳಿದ್ರು. ಆಗಲ್ಲ ಎಂದು ಹೇಳಿ ಕಳುಹಿಸಿದೆ ಎನ್ನುವ ಮೂಲಕ ನಿಖಿಲ್ ಗೆ ಬೆಂಬಲ ಸೂಚಿಸಿದ್ದರೆ.

ನಿಖಿಲ್ ಅವರಿಗೂ ಆಗಲ್ಲ ಅಂತಿದ್ದೆ. ಆದರೆ ಅವರು ಮೈತ್ರಿ ಪಕ್ಷದ ಅಭ್ಯರ್ಥಿ ಎಂದಿದ್ದಾರೆ. ಹೀಗಾಗಿ ಅವರಿಗೆ ಬೆಂಬಲ ಇದೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

ಇದೇ ವೇಳೆ ರಾಜಕೀಯವಾಗಿ ತಮ್ಮ ಅನುಭವವನ್ನು ನಿಖಿಲ್‌ ಜೊತೆ ಹಂಚಿಕೊಂಡ ಜಿ.ಮಾದೇಗೌಡ್ರು, ಉತ್ತಮವಾಗಿ ಜನ ಸೇವೆ ಮಾಡುವಂತೆ ಸಲಹೆ ನೀಡಿ ಕಳುಹಿಸಿದರು.

click me!