ಮೊದಲ ಹಂತ ಮುಗಿತು, 2ನೇ ಹಂತದ ಕ್ಷೇತ್ರಗಳಲ್ಲೂ ಮುಂದುವರಿದ ಐಟಿ ಬೇಟೆ..!

By Web Desk  |  First Published Apr 20, 2019, 7:05 PM IST

ರಾಜ್ಯದಲ್ಲಿ ಮೊದಲ ಹಂತದ ಕ್ಷೇತ್ರಗಳದಲ್ಲಿ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು 2ನೇ ಹಂತದಲ್ಲೂ ದಾಳಿ ಮುಂದುವರರಿಸಿದ್ದಾರೆ. ಇಂದು ವಿಜಯಪುರ ಹಾಗೂ  ಬಾಗಲಕೋಟೆಯಲ್ಲಿ ಕಾಂಗ್ರೆಸ್,ಜೆಡಿಎಸ್ ನಾಯಕರ ಮನೆ ಮೇಲೆ ದಾಳಿಯಾಗಿದೆ.


ಬಾಗಲಕೋಟೆ, ವಿಜಯಪುರ, [ಏ.20]: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಆಪ್ತರ ನಿವಾಸದ ಮೇಲೆ ಐಟಿ ರೇಡ್​ ನಡೆದಿದೆ. 

ಸಚಿವರ ಆಪ್ತರಾದ ಯಾಸೀನ್ ತುಮ್ಮರಮಟ್ಟಿ, ಆರೀಫ್ ಕಾರಲೇಕರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆಯ ವಿವೇಕಾನಂದ ನಗರದಲ್ಲಿರುವ ಆರೀಫ್ ಕಾರ್ಲೇಕರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. 

Tap to resize

Latest Videos

ದಳಪತಿ ಆಪ್ತರ ಮೇಲೆ ಮುಂದುವರಿದ ಐಟಿ ದಾಳಿ!

ವಿಜಯಪುರದಲ್ಲೂ ಐಟಿ ಬೇಟೆ
ವಿಜಯಪುರ ಲೋಕಸಭೆ ಮೈತ್ರಿಯ ಜೆಡಿಎಸ್ ಅಭ್ಯರ್ಥಿಗೆ ಐಟಿ‌ ಶಾಕ್ ನೀಡಿದ್ದು, ಮೈತ್ರಿ ಅಭ್ಯರ್ಥಿ‌ ಡಾ‌. ಸುನಿತಾ ಚವ್ಹಾಣ ಅವರ ಸಂಭಂದಿಕರ ಮನೆ ಮೇಲೆ ಐಟಿ ದಾಳಿ ಆಗಿದೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿ ಶಾಸಕ ದೇವಾನಂದ ಅವರ ಸಂಬಂಧಿ ರಾಮಚಂದ್ರ ದೊಡಮನಿ ಹಾಗೂ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ಸುಮಾರು 10 ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. 

ಮೊದಲ ಹಂತದಲ್ಲಿ ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಕಡೆ ಐಟಿ ದಾಳಿ ನಡೆದಿತ್ತು. ಇದೀಗ 2ನೇ ಹಂತದ ಕ್ಷೇತ್ರಗಳಲ್ಲೂ ಐಟಿ ದಾಳಿ ಮುಂದುವರಿದಿದೆ. 
ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!