ಮೋದಿ ಜೀವನಾಧಾರಿತ ವೆಬ್‌ ಸರಣಿ ನಿಷೇಧಿಸಿದ ಚುನಾವಣಾ ಆಯೋಗ!

By Web DeskFirst Published Apr 20, 2019, 6:08 PM IST
Highlights

ಮೋದಿ ವೆಬ್‌ ಸರಣಿ ನಿಷೇಧಿಸಿದ ಚುನಾವಣಾ ಆಯೋಗ| ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ನಿರ್ದೇಶನದ ವೆಬ್ ಸರಣಿ| 'ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌' ವೆಬ್ ಸರಣಿಗೆ ಚುನಾವಣಾ ಆಯೋಗದ ಬ್ರೇಕ್| 

ನವದೆಹಲಿ(ಏ.20): ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರ ಮತ್ತು ನಮೋ ಟಿವಿ ನಿಷೇಧಿಸಿದ್ದ ಚುನಾವಣಾ ಆಯೋಗ, ಇದೀಗ ಮೋದಿ ಜೀವನಾಧಾರಿತ ವೆಬ್ ಸರಣಿಯನ್ನೂ ನಿಷೇಧಿಸಿದೆ.

ಬಾಲಿವುಡ್ ನಿರ್ದೇಶಕ ಉಮೇಶ್ ಶುಕ್ಲಾ ಅವರ 'ಮೋದಿ: ಜರ್ನಿ ಆಫ್‌ ಎ ಕಾಮನ್‌ ಮ್ಯಾನ್‌' ವೆಬ್‌ ಸರಣಿಯನ್ನು ಚುನಾವಣಾ ಆಯೋಗ ನಿಷೇಧಿಸಿದ್ದು, ಮೋದಿ ವೆಬ್ ಸರಣಿಯ ಆನ್ ಲೈನ್ ಸ್ಟ್ರೀಮಿಂಗ್ ನಿಲ್ಲಿಸುವಂತೆ ಇರೋಸ್ ನೌಗೆ ಸೂಚಿಸಿದೆ.

Election Commission to Eros Now: It was brought to our notice that a web series "Modi-Journey of a Common Man, having 5 episodes is available on your platform. You're directed to stop forthwith the online streaming & remove all connected content of the series till further orders pic.twitter.com/ofs0neJMc3

— ANI (@ANI)

ಪ್ರಧಾನಿ ಮೋದಿ ಅವರ ಜೀವನ ಆಧಾರಿತ 'ಮೋದಿ: ಜರ್ನಿ ಆಫ್‌ ಎ ಕಾಮನ್‌ಮ್ಯಾನ್‌' ಐದು ಕಂತುಗಳನ್ನು ಒಳಗೊಂಡಿದೆ. ಆದರೆ ಚುನಾವಣೆ ಸಮಯದಲ್ಲಿ ಮತದಾರನ ಮೇಲೆ ಪ್ರಭಾವ ಬೀರಬಲ್ಲ ಅಂಶ ಬಿತ್ತರಿಸುವಂತಿಲ್ಲ ಎಂಬ ಆಯೋಗದ ನಿಯಮದ ಅನ್ವಯ ವೆಬ್ ಸರಣಿಗೆ ಬ್ರೇಕ್ ಹಾಕಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು,ಏ.23ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!