ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡ್ತಾರಂತೆ ರಾಹುಲ್| ಕಡು ಬಡವರಿಗೆ ತಿಂಗಳಿಗೆ 6 ಸಾವಿರ ರೂ. ಸಹಾಯಧನದ ಭರವಸೆ| ಪಕ್ಷ ಸದಾ ಬಡವರ ಪರ ಕೆಲಸ ಮಾಡಲಿದೆ ಎಂದ ರಾಹುಲ್ ಗಾಂಧಿ| ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ|
ನವದೆಹಲಿ(ಮಾ.26): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಡು ಬಡವರಿಗೆ ತಿಂಗಳಿಗೆ 6 ಸಾವಿರ ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಕಾಂಗ್ರೆಸ್‌ನ ಘೋಷಣೆಯನ್ನು ಬಡತನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಕರೆದಿರುವ ರಾಹುಲ್ ಗಾಂಧಿ, ಪಕ್ಷ ಸದಾ ಬಡವರ ಪರ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಅಧ್ಯಕ್ಷ, ರೈತರಿಗೆ ವಾರ್ಷಿಕ 6 ಸಾವಿರ ರೂ. ಕೊಡುವ ಮೂಲಕ ಮೋದಿ ಇಡೀ ದೇಶದ ರೈತ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಘೋಷಣೆಯನ್ನು 'ಧಮಾಕಾ' ಎಂದು ಹೇಳಿರುವ ರಾಹುಲ್, ಬಡತನವನ್ನು ಸಂಪೂರ್ಣವಾಗಿ ತೊಡೆದು ಹಾಕುವ ಯೋಜನೆ ಪಕ್ಷದ್ದಾಗಿದ್ದು, ಜಗತ್ತಿನ ಯಾವುದೇ ಸರ್ಕಾರ ಇಂತಹ ಯೋಜನೆ ಜಾರಿ ಕುರಿತು ಚಿಂತಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.