ಕರ್ಕರೆ ವಿರುದ್ಧದ ಹೇಳಿಕೆ ಕ್ಷಮೆ ಯಾಚಿಸಿದ ಸಾಧ್ವಿ ಪ್ರಜ್ಞಾ

By Web DeskFirst Published Apr 20, 2019, 4:12 PM IST
Highlights

ಹೇಮಂತ ಕರ್ಕರೆ ವಿಚಾರವಾಗಿ ಸಾಧ್ವಿ ಪ್ರಜ್ಞಾ ವಿವಾದಿತ ಹೇಳಿಕೆ| ಹೇಳಿಕೆ ಬೆನ್ನಲ್ಲೇ ತೀವ್ರ ವಿರೋಧ|ಮಾತುಗಳನ್ನು ಹಿಂಪಡೆಯುತ್ತೇನೆಂದ ಸಾಧ್ವಿ

ನವದೆಹಲಿ[ಏ.20]: ಹೇಮಂತ ಕರ್ಕರೆ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ತಮ್ಮ ಮಾತುಗಳನ್ನು ಹಿಂಪಡೆದಿದ್ದರೆ ಹಾಗೂ ಕ್ಷಮೆ ಯಾಚಿಸಿದ್ದಾರೆ.

‘ಹೇಮಂತ ಕರ್ಕರೆ ಅವರು ನನ್ನನ್ನು ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಸುಳ್ಳು ಕೇಸು ಹಾಕಿ ಸಿಲುಕಿಸಿದರು. ನನ್ನ ಮೇಲೆ ದೌರ್ಜನ್ಯ ಎಸಗಿದರು. ಆಗ ನಾನು ಅವರಿಗೆ ‘ನೀನು ನಾಶವಾಗಿ ಹೋಗುತ್ತೀಯಾ. ನಿನ್ನ ವಂಶವೇ ಸರ್ವನಾಶವಾಗಿ ಹೋಗುತ್ತದೆ ಎಂದು ಶಾಪ ಹಾಕಿದೆ. ನಾನು ಶಾಪ ಹಾಕಿದ ಕೆಲವೇ ತಿಂಗಳುಗಳಲ್ಲಿ ಆತ ಆತಂಕವಾದಿಗಳಿಂದ ಹತ್ಯೆಯಾಗಿ ಹೋದ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ವಿರುದ್ಧ ವ್ಯಾಪಕ ಖಂಡನೆಯಾಗಿತ್ತು.

ನನ್ನ ಶಾಪ ಮತ್ತು ಅವರ ಕರ್ಮದ ಫಲವಾಗಿ ಹೇಮಂತ್ ಕರ್ಕರೆ ಸಾವು: ಸಾಧ್ವಿ ಪ್ರಜ್ಞಾ!

ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಾಧ್ವಿ ತಮ್ಮ ಹೇಳಿಕೆ ಕ್ಷಮೆ ಯಾಚಿಸಿ, ತಮ್ಮ ಮತನ್ನು ಹಿಂಪಡೆಯುವುದಾಗಿ ಹೇಳಿದ್ದಾರೆ ’ಹೇಮಂತ ಕರ್ಕರೆ ಕುರಿತು ನಾನು ನೀಡಿದ ಹೇಳಿಕೆಯಿಂದ ದೇಶದ ವೈರಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ನನ್ನ ವಿವಾದಿತ ಹೇಳಿಕೆ ಹಿಂಪಡೆಯುತ್ತೇನೆ ಮತ್ತು ನನ್ನ ಹೇಳಿಕೆಗೆ ಕ್ಷಮೆ ಕೇಳುತ್ತೇನೆ. ಇದು ನನಗೆ ವೈಯಕ್ತಿವಾಗಿಯೂ ನೋವು ಉಂಟು ಮಾಡಿದೆ’ ಎಂದಿದ್ದಾರೆ. 

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂಧು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!