ಕರ್ಕರೆ ಕುರಿತಾದ ಸಾಧ್ವಿ ಹೇಳಿಕೆ: ನೋಟಿಸ್ ಕಳುಹಿಸಿದ ಆಯೋಗ!

Published : Apr 20, 2019, 03:57 PM ISTUpdated : Apr 20, 2019, 04:01 PM IST
ಕರ್ಕರೆ ಕುರಿತಾದ ಸಾಧ್ವಿ ಹೇಳಿಕೆ: ನೋಟಿಸ್ ಕಳುಹಿಸಿದ ಆಯೋಗ!

ಸಾರಾಂಶ

ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಾಧ್ವಿ ಪ್ರಜ್ಞಾ ಸಿಂಗ್| ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್| ಹೇಮಂತ್ ಕರ್ಕರೆ ನನ್ನ ಶಾಪದಿಂದಾಗಿ ಬಲಿಯಾಗಿದ್ದಾರೆ ಎಂದಿದ್ದ ಸಾಧ್ವಿ| ಸಾಧ್ವಿಗೆ ನೋಟಿಸ್ ನೀಡಲಿರುವ ಚುನಾವಣಾ ಆಯೋಗ|

ಭೋಪಾಲ್(ಏ.20): ಮುಂಬೈ ದಾಳಿಯ ಹುತಾತ್ಮ ಹೇಮಂತ್ ಕರ್ಕರೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಭೋಪಾಲ್ ಮತಕ್ಷೇತ್ರದ ಚುನಾವಣಾಧಿಕಾರಿ ನೀಡಿದ ಮಾಹಿತಿ ಆಧಾರದ ಮೇಲೆ ಸಾಧ್ವಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜೈಲಿನಲ್ಲಿ ಹೇಮಂತ್ ಕರ್ಕರೆ ನನಗೆ ಕಿರುಕುಳ ನೀಡಿದ್ದು, ನನ್ನ ಶಾಪದಿಂದಲೇ ಕರ್ಕರೆ ಮುಂಬೈ ದಾಳಿಯಲ್ಲಿ ಬಲಿಯಾದರು ಎಂದು ಸಾಧ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

PREV
click me!

Recommended Stories

ಒಬ್ಬ ನಟ, ಒಂದೇ ಹೆಸರಿನ ಚಿತ್ರಗಳಲ್ಲಿ ಮೂರು ಬಾರಿ ನಟಿಸಿದ್ದಾರೆ ಯಾರು ಈ ನಟ?
ಬಿಗ್ಗೆಸ್ಟ್‌ ಸ್ಟಾರ್‌ ವಾರ್‌ ಇದು! ದಳಪತಿ ವಿಜಯ್‌ ಎದುರು ಕದನಕ್ಕಿಳಿದ ಪ್ರಶಾಂತ್‌ ನೀಲ್-ಎನ್‌ಟಿಆರ್!